ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಸಾಯಿಖಾನೆ ಮುಚ್ಚಲು ಆಗ್ರಹಿಸಿ ಪ್ರತಿಭಟನೆ

Lingaraj Badiger
Updated On : 19 May 2014, 11:41 am

ರಾಣಿಬೆನ್ನೂರು: ದೇಶದಾದ್ಯಂತ ನಡೆಯುತ್ತಿರುವ ಗೋಹತ್ಯೆ ಕಸಾಯಿಖಾನೆ ಮುಚ್ಚಬೇಕೆಂದು ಆಗ್ರಹಿಸಿ ಮೇ 27ರಂದು ಬೆಳಗ್ಗೆ 10 ಗಂಟೆಗೆ ನಗರದ ಮಿನಿ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಭಾರತ ಕ್ರಾಂತಿ ಸೇನಾ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ಜ್ಞಾನ ಸಂದೇಶ ಹಾಗೂ ಧರ್ಮದ ಉದ್ದೇಶ ನೀಡಿರುವ ಗೋಮಾತೆಯನ್ನು ಭಾರತೀಯರಾದ ನಾವು ದೇವತೆ ಎಂದು ನಂಬಿ ನಿತ್ಯ ಪೂಜಿಸುತ್ತಿದ್ದು, ಇದನ್ನು ಸಹಿಸಲಾಗದ ಇತರರು ನಿತ್ಯ ನಮ್ಮ ದೇವತೆಗಳಾದ ಗೋವುಗಳನ್ನು ಕಡಿದು ತಿನ್ನುವುದಲ್ಲದೆ ಭಾರತದಿಂದ ಇತರೆ ದೇಶಗಳಿಗೆ ರಪ್ತು ಮಾಡುವುದರೊಂದಿಗೆ ವಿದೇಶಿಗರ ನಾಲಿಗೆಗೆ ನಮ್ಮ ಗೋಮಾತೆಯ ಮಾಂಸದ ರುಚಿ ನೆಕ್ಕಿಸಿರುವ ಕಾರಣ ದೇಶದಲ್ಲಿ ನಿತ್ಯ ಲಕ್ಷಾಂತರ ಗೋವುಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ ಎಂದರು.
ದೇಶದ ಪೆಟೆಂಟ್ ಅವನತಿಯತ್ತ: ದೇಶ ವಿದೇಶಗಳಲ್ಲಿನ ಹಲವಾರು ಔಷಧಿ ಕಂಪನಿಯವರು ತಾವು ತಯಾರಿಸುವ ಔಷಧಿಗಳಲ್ಲಿ ಬಳಸಲು ಹಾಗೂ ಇತರೆ ಗಿಡಮೂಲಿಕೆಯ ಔಷಧಿಗಳ ತಯಾರಿಕೆಗಾಗಿ ಬಳಸುವ ಗೋ ಮೂತ್ರ ಮತ್ತು ಗೋ ಲದ್ದಿ ನಮ್ಮ ದೇಶದ ಪೆಟೆಂಟ್ ಎಂದು ಪ್ರಪಂಚವೇ ಒಪ್ಪಿಕೊಂಡಿದ್ದು, ನಿತ್ಯ ಸಾವಿರಾರು ಗೊವುಗಳು ಸಾಯುತ್ತಿರುವ ಕಾರಣ ಇದೆಲ್ಲದರ ಉಳಿವಿಗಾಗಿ ಗೋಮಾತೆಯ ಹತ್ಯೆ ತಡೆಯುವುದಕ್ಕಾಗಿ ಕಾಸಾಯಿಖಾನೆ ಮುಚ್ಚಬೇಕೆಂದು ಆಗ್ರಹಿಸಿ ಮೇ 27ರಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೆವೆಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು. ಭಾರತ ಕ್ರಾಂತಿ ಸೇನೆ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಪಾಲನಕರ,ನಗರಾಧ್ಯಕ್ಷ ವಿಜಯಕುಮಾರ ಭಾವಾ, ಜಿಲ್ಲಾ ಅಧ್ಯಕ್ಷ ಗಿರೀಶ ವಡ್ಡರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement