ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಂಪ್ಯೂಟರ್ ತರಬೇತಿ: ಅರ್ಜಿ ಆಹ್ವಾನ

Lingaraj Badiger
Updated On : 20 May 2014, 12:42 pm

ಹಾವೇರಿ: ಸರ್ಕಾರದ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಡೆಯುತ್ತಿರುವ ಹಾವೇರಿ ಜಿಲ್ಲೆ ನೆಗಳೂರು ವರದಾ ವಿದ್ಯಾಪೀಠದಲ್ಲಿ  ಬೇಸಿಕ್ ಕಂಪ್ಯೂಟರ್ ಮತ್ತು ಡಿಟಿಪಿ ಉಚಿತ ತರಬೇತಿ ಜೂ. 2ರಿಂದ 5 ತಿಂಗಳು ವಸತಿ ರಹಿತ ತರಬೇತಿ ನೀಡಲು ಅರ್ಹ ಯುವಕ ಹಾಗೂ ಯವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು 18 ರಿಂದ 30 ವರ್ಷದೊಳಗಿನವಾರಗಿದ್ದು, ಎಸ್ಸೆಸ್ಸೆಎಲ್ಸಿ ಉತ್ತೀರ್ಣರಾಗಿರಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರು. 500 ವಿದ್ಯಾರ್ಥಿ ವೇತನ ನೀಡಲಾಗುವುದು. ತರಬೇತಿ ಪಡೆಯಲು 40 ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ 29 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಿದವರು ಮೇ 30ರಂದು ಬೆಳಗ್ಗೆ 11ಗಂಟೆಗೆ ಸ್ವಂತ ಖರ್ಚಿನಲ್ಲಿ ಮೂಲ ದಾಖಲಾತಿಗಳೊಂದಿಗೆ ನೆಗಳೂರಿನ ವರದಾ ವಿದ್ಯಾಪೀಠದಲ್ಲಿ ಸಂದರ್ಶನಕ್ಕೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ವರದಾ ವಿದ್ಯಾಪೀಠದ ಕಚೇರಿ ನೆಗಳೂರು ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಜಿಲ್ಲಾಡಳಿತ ಭವನ ದೇವಗಿರಿ ಹಾವೇರಿ (9591177017, 8095989446) ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆಯೆಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ತಿಳಿಸಿದೆ.
--
ಠಾಣೆ ಎದುರು ಪುರಸಭೆ ಸದಸ್ಯರ ಪ್ರತಿಭಟನೆ
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದ ಪೊಲೀಸ್ ಠಾಣೆ ಪಿಎಸ್ಐ ಸಿದ್ಧಾರೂಢ ಬಡಿಗೇರ ಅವರು ಜನಪ್ರತಿನಿಧಿಗಳಿಗೆ ಮಾನ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಪೊಲೀಸ್ ಠಾಣೆ ಎದುರು ಸಂಜೆ ಪ್ರತಿಭಟನೆ ನಡೆಸಿದರು.
ಬಂಕಾಪುರ ಪೊಲೀಸ್ ಠಾಣೆ ಪಿಎಸ್ಐ ಸಿದ್ಧಾರೂಢ ಬಡಿಗೇರ ಅವರು ಸಣ್ಣಪುಟ್ಟ ಅಂಗಡಿಕಾರರ ಹಾಗೂ ಬೈಕ್ ಸವಾರರಿಗೆ ಇಲ್ಲ ಸಲ್ಲದ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದಾಬಾಗಳನ್ನು ರಾತ್ರಿ 10 ಗಂಟೆಗೆ ಮುಚ್ಚಬೇಕು. ರಾತ್ರಿ ವೇಳೆ ಯಾರು ಓಡಾಡಬಾರದು ಪಾನಬೀಡಾ ಅಂಗಡಿಗಳೂ 10 ಗಂಟೆಗೆ ಮುಚ್ಚುವದರಿಂದ ಬಡ ಅಂಗಡಿಕಾರರಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ನಿತ್ಯ ತೊಂದರೆ ಉಂಟಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಶಿಗ್ಗಾಂವಿ ಪೊಲೀಸ್ ಠಾಣೆ ಸಿಪಿಐ ಹೊಸಮನಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಕಾನೂನು ವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೆಲವು ನಿಯಮಾವಳಿಗಳನ್ನು ಕಡ್ಡಾಯ ಪಾಲಿಸಬೇಕಾಗುತ್ತದೆ. ಅದನ್ನು ಭಾನುವಾರ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿ ಹೇಳಿದ ನಂತರ ಪ್ರತಿಭಟನೆ ಶಾಂತಿಗೊಂಡಿತು.
ಬಂಕಾಪುರ ಪೊಲೀಸ್ ಠಾಣೆ ಪಿಎಸ್ಐ ಸಿದ್ಧಾರೂಢ ಬಡಿಗೇರ ಮಾತನಾಡಿ, ಕಾನೂನು ಬಾಹಿರವಾಗಿ ಯಾರ ಮೇಲೆ ದಂಡ ಹಾಕಿಲ್ಲ. ಸಾರ್ವಜನಿಕ ವಲಯದ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಕಾನೂನು, ನಿಯಮ ಉಲ್ಲಂಘಸಿದರೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಮುನ್ನಾ ಗುಲ್ಮಿ, ಬಾಬಾ ತರಿನ, ಉಮೇಶ ಮಾಳಗಿಮನಿ, ಇಸ್ಮಾಯಿಲ್ ದೊಡ್ಡಮನಿ, ಶಾಂತಯ್ಯನವರು ಗಚ್ಚಿನಮಠ, ಮುಖಂಡರಾದ ಮಲ್ಲೇಶಪ್ಪ ಬಡ್ಡಿ, ಬಸವರಾಜ ಕಟ್ಟಿಮನಿ, ಕಾಳಪ್ಪ ಬಡಿಗೇರ, ಶಿವು ಅಂಗಡಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement