ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಸಿಎಂ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

Lingaraj Badiger
Updated On : 20 May 2014, 12:49 pm

ಬ್ಯಾಡಗಿ: ತಾಲೂಕಿನ ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಸಲಾಗುತ್ತಲಿರುವ ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳಿಗೆ ಹೊಸ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಗೀತಾ ಕುಂದಾಪುರ ತಿಳಿಸಿದ್ದಾರೆ. ಬ್ಯಾಡಗಿ ಬಿಸಿಎಂ ಮೇಟ್ರಿಕ್ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವರೆಗೆ ಹಾಗೂ ತಾಲೂಕಿನ ಗುಂಡೇನಹಳ್ಳಿಯ ಬಿಸಿಎಂ ಮೇಟ್ರಿಕ್ಪೊರ್ವ ಬಾಲಕರ ನಿಲಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವರೆಗೆ, ಕಲ್ಲೇದೇವರ ಬಿಸಿಎಂ ಮೇಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವರೆಗೆ, ಆಣೂರ ಬಿಸಿಎಂ ಮೇಟ್ರಿಕ್ ಪೂರ್ವ ನಿಲಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವರೆಗೆ, ಆಣೂರಿನ ಖಾಸಗಿ ವಸತಿ ನಿಲಯ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವರೆಗೆ,  ಶಿಡೇನೂರಿನ ಡಿ. ಲಿಂಗನಗೌಡ್ರ ಉಚಿತ ಪ್ರಸಾದ ನಿಲಯಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವರೆಗೆ, ಕಾಗಿನೆಲೆಯ ಕನಕದಾಸ ಉಚಿತ ಪ್ರಸಾದ ನಿಲಯಯದಲ್ಲಿ 5ನೇ ತರಗತಿಯಿಂದ 10ನೇ ತರಗತಿ ವರೆಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಶಕ್ತಿಯುಳ್ಳ ವಿದ್ಯಾರ್ಥಿಗಳು ತಾಪಂ ಆವರಣದಲಿರುವ ಹಿಂದುಳಿದ ಇಲಾಖೆಯ ವಿಸ್ತರಣಾಧಿಕಾರಿ ಅಥವಾ ವಸತಿ ನಿಲಯಗಳ ಮೇಲ್ವಿಚಾರಕರನ್ನು ಭೇಟಿ ಮಾಡಿ ಅರ್ಜಿ ಪಡೆದು, ಜೂ. 5ರೊಳಗೆ ಕಾರ್ಯಾಲಯಕ್ಕೆ ತಲುಪಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement