ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿದ್ಯಾರ್ಥಿಗಳ ಸಾಧನೆ

Lingaraj Badiger
Updated On : 20 May 2014, 12:42 pm

ಹಾವೇರಿ: ನಗರದ ಸರ್ಕಾರಿ ಬಾಲಕಿಯರ ಬಾಲಮಂದಿರದ ರೋಜಾ ಬಿ. ಎಸ್ಸೆಸ್ಸೆಲ್ಸಿಯಲ್ಲಿ ಶೇ.73, ದ್ವಿತೀಯ ಪಿಯುಸಿಯಲ್ಲಿ ರೇಖಾ ಪಿ. ಶೇ.79, ನಾಗಮ್ಮ ಹುಡೇದ ಶೇ.78 ಅಂಕ ಪಡೆದಿದ್ದಾರೆಂದು ಹಾವೇರಿ ಬಾಲಕಿಯರ ಬಾಲ ಮಂದಿರ ಪರಿವೀಕ್ಷಣಾಧಿಕಾರಿ ತಿಳಿಸಿದ್ದಾರೆ.
ಟ್ರ್ಯಾಕ್ಟರ್- ಬಸ್ ಡಿಕ್ಕಿ: 13 ಜನ ಗಾಯ
ಶಿಗ್ಗಾಂವಿ: ರಸ್ತೆ ಬದಿಯ ಕಸ ಸ್ವಚ್ಛಗೊಳಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟ್ರ್ಯಾಕ್ಟರ್ವೊಂದಕ್ಕೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಸೇರಿದಂತೆ 13 ಜನರು ಗಾಯಗೊಂಡ ಘಟನೆ ಸೋಮವಾರ ಶಿಗ್ಗಾಂವಿ ಹೊರವಲಯ ರಂಭಾಪುರಿ ಕಾಲೇಜ ಹತ್ತಿರ ರಾಷ್ಟ್ರೀ ಹೆದ್ದಾರಿಯಲ್ಲಿ ನಡೆದಿದೆ. ತಿರುವಿನ ರಸ್ತೆ ಮೇಲೆ ಟ್ರ್ಯಾಕ್ಟರ್ ನಿಲ್ಲಿಸಿ, ಹೆದ್ದಾರಿ ಪ್ರಾಧಿಕಾರದ ದಿನಗೂಲಿ ನಾಲ್ವರು ಸಿಬ್ಬಂದಿ ರಸ್ತೆ ಪಕ್ಕದ ಕಸ ಸ್ವಚ್ಛಗೊಳಿಸುತ್ತಿದ್ದರು. ಹುಬ್ಬಳ್ಳಿಯಿಂದ ಹಾವೇರಿಗೆ ಹೊರಟಿದ್ದ ಹಾವೇರಿ ಡಿಪೋಗೆ ಸೇರಿದ ಬಸ್ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಅದರ ಚಾಲಕ ಗಂಭೀರವಾಗಿ ಗಾಯಗೊಂಡರೆ, ಬಸ್ನಲ್ಲಿದ್ದ 12 ಜನರು ಗಾಯಗೊಂಡು ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.  ದೂರು ದಾಖಲಿಸಿಕೊಂಡ ಶಿಗ್ಗಾಂವಿ ಪೊಲೀಸ್ ಠಾಣೆ ಪಿಎಸ್ಐ ಶಶಿಧರ ಜಿ.ಎನ್. ತನಿಖೆ ಕೈಗೊಂಡಿದ್ದಾರೆ.
ಸಿಡಿಲಿಗೆ ಮಹಿಳೆ ಸಾವು, ಬಾಲಕ ಗಂಭೀರ
ರಾಣಿಬೆನ್ನೂರು: ಸಿಡಿಲು ಬಡಿದು ಮಹಿಳೆಯೊಬ್ಬಳು ಸ್ಥಳದಲ್ಲೇ ಮೃತಪಟ್ಟು, ಬಾಲಕನೊಬ್ಬ ತೀವ್ರ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ನಗರದ ಸಿದ್ದೇಶ್ವರ ನಗರದಲ್ಲಿ ಸೋಮವಾರ ಸಂಭವಿಸಿದೆ. ಚಂದ್ರಕಲಾ ಪುಟ್ಟಪ್ಪ ಹುಲ್ಲತ್ತಿ (25) ಸಿಡಿಲು ಬಡಿದು ಮೃತಪಟ್ಟ ಮಹಿಳೆ. ಮನೋಜ ನಾರಾಯಣಪ್ಪ ಐರಣಿ ಎಂಬ ಬಾಲಕ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದಾನೆ. ಈತನನ್ನು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಳೆ ಬರುತ್ತಿದ್ದ ವೇಳೆ ಮನೆ ಚಾವಣಿ ಮೇಲೆ ಒಣಗಿ ಹಾಕಿದ್ದ ಬಟ್ಟೆ ತರಲು ಹೋಗಿದ್ದಾಗ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ರಾಣಿಬೆನ್ನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ಆಡು ಸಾವು: ರಾಣಿಬೆನ್ನೂರು ತಾಲೂಕಿನ ಕರೂರು ಗ್ರಾಮದಲ್ಲಿ ಸಿಡಿಲು ಬಡಿದು ಶಿವಪ್ಪ ಮಹಾದೇವಪ್ಪ ಮಡಿವಾಳರ ಎಂಬುವರಿಗೆ ಸೇರಿದ ಮೂರು ಆಡುಗಳು ಮೃತಪಟ್ಟಿವೆ. ಪಶು ಆಸ್ಪತ್ರೆ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಾವಮ್ಮ ಹೊನ್ನಣ್ಣವರ
ಶಿಗ್ಗಾಂವಿ: ತಾಲೂಕಿನ ಹೂಲಗೂರ ಗ್ರಾಮದ ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಪಾಟೀಲ ಅವರ ತಾಯಿ ಸಾವಮ್ಮ ಚನ್ನಬಸಪ್ಪ ಹೊನ್ನಣ್ಣವರ (95) ಸೋಮವಾರ ನಿಧನರಾಗಿದ್ದಾರೆ. ಮೃತರಿಗೆ ಒಬ್ಬ ಪುತ್ರ, ನಾಲ್ವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವಿದೆ. ಮಂಗಳವಾರ ಮೃತರ ಅಂತ್ಯಕ್ರಿಯೆ ನಡೆಯಲಿದೆ.
ಸಂತಾಪ: ಶಾಸಕ ಬಸವರಾಜ ಬೊಮ್ಮಾಯಿ, ಸಂಸದ ಪ್ರಹ್ಲಾದ್ ಜೋಶಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಜಿಪಂ ಸದಸ್ಯ ಬಿ.ಟಿ. ಇನಾಂತಿ, ಸುಜಾತಾ ಕಲಕಟ್ಟಿ, ನಿಂಗಪ್ಪ ಹರಿಜನ, ಲಕ್ಷ್ಮವ್ವ ತೋಟದ, ವೀರನಗೌಡ ಪಾಟೀಲ, ನಿಂಗಣ್ಣ ಜವಳಿ, ತಿಪ್ಪಣ್ಣ ಸಾತಣ್ಣವರ ಸಂತಾಪ ಸೂಚಿಸಿದ್ದಾರೆ.
ಹಂಪಮ್ಮ ಹರಶೆಟ್ರ
ಹಾನಗಲ್ಲ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹಂಪಮ್ಮ ಗದಿಗೆಪ್ಪ ಹರಶಟ್ರ (88) ಭಾನುವಾರ ನಿಧನರಾದರು. ಮೃತರಿಗೆ 6 ಗಂಡು ಮಕ್ಕಳು, 2 ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement