ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ: ಕಂಬಳಿ
ಕನ್ನಡಪ್ರಭ ವಾರ್ತೆ, ಕುಕನೂರು, ಫೆ. 7
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು, ಶಿಕ್ಷಕರು ಶ್ರಮಿಸಬೇಕು. ಅಂದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ತಾಪಂ ಉಪಾಧ್ಯಕ್ಷೆ ಮಹಾದೇವಿ ಕಳಕಪ್ಪ ಕಂಬಳಿ ಹೇಳಿದರು.
ಸಮೀಪದ ಯರೇಹಂಚಿನಾಳ ಗ್ರಾಮ ಪಂಚಾಯ್ತಿ, ಕೊಪ್ಪಳ ಜಿಲ್ಲಾಡಳಿತ, ಜಿಪಂ ಹಾಗೂ ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಶಿಕ್ಷಣ ಇಲಾಖೆಗಳ ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಸ್ವಾವಲಂಬಿ ಬದುಕಿನ ಬಗ್ಗೆ ತಿಳಿಹೇಳುವುದು ಅಗತ್ಯವಾಗಿದೆ ಎಂದರು.
ಮುಖ್ಯೋಪಾಧ್ಯಾಯ ಎ.ಎ. ಗಿರಡ್ಡಿ ಮಾತನಾಡಿ, ಶಿಕ್ಷಣವು ಮಗು ಕೇಂದ್ರಿತವಾಗಿರಬೇಕು. ಮಕ್ಕಳ ಸಮಸ್ಯೆಗಳ ಕುರಿತು ಸಮಾಲೋಚಿಸಬೇಕು ಎಂದರಲ್ಲದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ವಿವರಣೆ ನೀಡಿದರು.
ಸಂಯೋಜಕ ಕಲ್ಲಪ್ಪ ತಳವಾರ ಮಾತನಾಡಿದರು. ಸಭೆಯ ನಡವಳಿಕೆಯನ್ನು ಈರಣ್ಣ ಇಟಗಿ ಮಂಡಿಸಿದರು. ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ ಗುಗ್ಗರಿ ಮಕ್ಕಳ ಅಂಕಿ ಸಂಖ್ಯೆಗಳ ವಿವರಣೆ ನೀಡಿದರು.
ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಗ್ರಾಪಂ ಕಾರ್ಯದರ್ಶಿ ಸುಶೀಲಾ ಬಾಯಿ ಉತ್ತರಿಸಿದರು. ಗ್ರಾಪಂ ಅಧ್ಯಕ್ಷೆ ರೇಣಮ್ಮ ನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಗೌರಮ್ಮ ಕಂಬಳಿ, ಸದಸ್ಯರಾದ ಅಂದಾನಸ್ವಾಮಿ ಲಕ್ಕನಕಟ್ಟಿ, ಚನ್ನಪ್ಪ ಚಟ್ಟಿ, ಶರಣಪ್ಪ ಕುರಿ, ಬಸವರಾಜ ಪುಣ್ಯದ, ಹನಮಂತಪ್ಪ ಬಾವಿಹುಡೇದ, ಕಲ್ಲಮ್ಮ, ಬೀಬಿಜಾನ್ ರ್ಯಾವಣಕಿ, ಗಂಗಾ ಕಟ್ಟಿ, ಶಂಬಣ್ಣ ಕೋಳೂರು,ಬಸಯ್ಯ, ಮಕ್ಕಳ ರಕ್ಷಣಾ ಯೋಜನೆ ಬಸಯ್ಯ ದ್ಯಾಂಪುರ, ಎಸ್ಡಿಎಂಸಿ ಅಧ್ಯಕ್ಷ ಬಾಳಪ್ಪ ಎಲಿಜಾಗುಳೇದ, ಶರಣಪ್ಪ ಹಿರೇಹೊಳಿ, ಮುಖ್ಯ ಗುರು ಬಸವರಾಜ ಕಲಾಲ ಬಂಡಿ, ಹನುಮಂತಪ್ಪ ಪೂಜಾರ, ನಿಂಗಪ್ಪ ದೇಸಾಯಿ, ಸಂಕಪ್ಪ ಹಳ್ಳಿ, ಇಮಾಮಸಾಬ ಉಮಚಗಿ, ಶರಣಪ್ಪ ಕುರಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.