ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಗವಿಮಠ ಪ್ರಸಾದ ಸವಿದವರು 12 ಲಕ್ಷ!

Parashurama
Updated On : 10 Feb 2013, 11:31 am

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಮಹಾದಾಸೋಹದಲ್ಲಿ ಪ್ರಸಾದ ಸವಿದವರ ಸಂಖ್ಯೆ 12ರಿಂದ 14 ಲಕ್ಷ. ಇದು ಹಿಂದಿನ ವರ್ಷಗಳಲ್ಲಿ ನಡೆದ ಜಾತ್ರೆಗಿಂತ ಅಧಿಕ ಎಂದೇ ವಿಶ್ಲೇಷಿಸಲಾಗುತ್ತಿದ್ದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭಕ್ತರು ಪ್ರಸಾದ ಸೇವಿಸಿದ್ದು ವಿಶೇಷ ಎಂದೇ ಬಣ್ಣಿಸಲಾಗುತ್ತಿದೆ.
ಇದೆಲ್ಲಾ ಜಾತ್ರೆಯ ಹದಿನೈದು ದಿನಗಳ ಕಾಲ ನಡೆದ ಮಹಾಪ್ರಸಾದದ ಲೆಕ್ಕಾಚಾರ. ಕೊನೆ ದಿನವಾದ ಭಾನುವಾರ ಅಮಾವಾಸ್ಯೆಯಂದು ನಡೆಯುವ ಮಹಾಪ್ರಸಾದಕ್ಕೂ 50 ಕ್ವಿಂಟಲ್ ಗೋದಿ ಹುಗ್ಗಿ ತಯಾರು ಮಾಡುವ ಕಾರ್ಯ ಶನಿವಾರ ಇಡೀ ರಾತ್ರಿ ನಡೆಯಿತು. ಇನ್ನು 60 ಕ್ವಿಂಟಲ್ ಅಕ್ಕಿ ಅನ್ನ ಮಾಡಿ ಬಡಿಸಲಾಗುತ್ತದೆ. ಇದರ ಜೊತೆಗೆ ತುಪ್ಪ, ಸಾಂಬಾರ್ ಸೇರಿದಂತೆ ಇತರೆ ತಿನಿಸುಗಳು ಪ್ರಸಾದದ ಸವಿ ಹೆಚ್ಚಿಸಲಿವೆ. 600 ಕ್ವಿಂಟಲ್ ಅಕ್ಕಿ, 450 ಕ್ವಿಂಟಲ್ ಸಿಹಿ (ಮಾದಲಿ, ಬೂಂದಿ, ಬಾದುಷಾ, ಬದಾಮ್ ಪುರಿ) ಪದಾರ್ಥಗಳು. 10 ಲಕ್ಷ ರೊಟ್ಟಿ, 12 ಕ್ವಿಂಟಲ್ ತುಪ್ಪ, 6 ಸಾವಿರ ಲೀಟರ್ ಹಾಲು, 16 ಬ್ಯಾರಲ್ ಒಳ್ಳೆಣ್ಣೆ ಹಾಗೂ 10 ಟನ್ ತರಕಾರಿ ಖರ್ಚಾಗಿದೆ. ಇನ್ನು ಇದಲ್ಲದೆ ಇತರೆ ಸಾಂಬಾರ್ ಪದಾರ್ಥಗಳು ಲೆಕ್ಕವಿಲ್ಲದಷ್ಟು ಖರ್ಚಾಗಿವೆ ಎನ್ನುತ್ತಾರೆ ಮಹಾದಾಸೋಹದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಮನಗೌಡ ಅವರು.
ಶ್ರಮಿಸಿದವರು: ಇಷ್ಟೊಂದು ದೊಡ್ಡ ಪ್ರಮಾಣದ ಪ್ರಸಾದ ವಿತರಣಾ ಕಾರ್ಯಕ್ರಮದ ಹಿಂದೆ ಬೆವರು ಸುರಿಸಿದವರು ಅನೇಕ. ಅಷ್ಟೇ ಅಲ್ಲ, ಯಾವುದೇ ಸಮಿತಿ, ಅಧಿಕಾರ, ಪದಾಧಿಕಾರಿ ಇಲ್ಲದೆ ಅಚ್ಚುಕಟ್ಟಾಗಿ ಹಾಗೂ ಸಾಂಗವಾಗಿ ನಡೆದಿರುವುದು ವಿಶೇಷ. ಯಾರಿಗೂ ಇಂಥದ್ದೆ ಮಾಡಬೇಕು ಹಾಗೂ ಮಾಡಲೇಬೇಕೆಂಬ ಒತ್ತಡ ಇಲ್ಲದಿದ್ದರೂ ಹಗಲು-ರಾತ್ರಿಯೆನ್ನದೇ ಬೆವರು ಸುರಿಸಿದವರು ಮಾತ್ರ ಎಲೆಮರೆ ಕಾಯಂತಿರುವವರು.
ಪ್ರತಿ ನಿತ್ಯವೂ ಅಡುಗೆ ಮಾಡುವುದಕ್ಕಾಗಿ ಸುಮಾರು 150ರಿಂದ 200 ಬಾಣಸಿಗರು ಕೆಲಸ ಮಾಡಿದ್ದಾರೆ.
ಹಾಗಂತ ಇವರ್ಯಾರೂ ದೂರದಿಂದ ಬಂದ ಬಾಣಸಿಗರಲ್ಲ, ಗವಿಮಠದ ಭಕ್ತರೆ. ಅಂದಾಜು 3 ಸಾವಿರ ಬಾಣಸಿಗರು ಅಡುಗೆ ತಯಾರು ಮಾಡುವಲ್ಲಿ ಶ್ರಮಿಸಿದ್ದಾರೆ. ಇನ್ನು ಸಿದ್ಧ ಮಾಡಿದ ಅಡುಗೆಯನ್ನು ಬಡಿಸಲು ಮತ್ತು ಉಸ್ತುವಾರಿ ನೋಡಿಕೊಳ್ಳಲು ನಿತ್ಯವೂ 1000 -1500 ಜನರು ಬೆವರು ಸುರಿಸಿದ್ದಾರೆ. ಹದಿನೈದು ದಿನಗಳ ಲೆಕ್ಕ ಹಾಕಿದರೆ ಅಡುಗೆ ಮಾಡುವವರು, ಬಡಿಸುವವರು ಸೇರಿದಂತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 30 ಸಾವಿರ ಜನರು ಶ್ರಮಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments