ಕಾವ್ಯದಲ್ಲಿ ವಿಡಂಬನೆ ಇರಲಿ: ರಮೇಶ
ಗಂಗಾವತಿ: ದೈನಂದಿನ ಸಂಗತಿಗಳನ್ನು ವಿಡಂಬನಾತ್ಮಕವಾಗಿ ಕಾವ್ಯದ ಮೂಲಕ ಹೇಳುವಂತೆ ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಮೇಶ ಗಬ್ಬೂರು ಕವಿಗಳಿಗೆ ಸಲಹೆ ನೀಡಿದರು.
ಅವರು ನಗರದ ಶ್ರೀಚನ್ನಬಸವಸ್ವಾಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವ್ಯಲೋಕ ಸಂಘಟನೆ ಆಯೋಜಿಸಿದ್ದ 37ನೇ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವ್ಯ ಮಾರ್ಮಿಕವಾಗಿದ್ದು ಚರ್ಚೆ ಆಗಬೇಕು. ಕವಿಗಳು ಅಧ್ಯಯನಶೀಲರಾಗಿ ಕಾವ್ಯ ರಚನೆ ಮಾಡಬೇಕು. ಕಾವ್ಯದಲ್ಲಿ ವಿಡಂಬನೆ ಇದ್ದರೆ ಅದು ಎಲ್ಲರ ಗಮನ ಸೆಳೆಯುತ್ತದೆ. ಉತ್ಸವ, ಸಮಾರಂಭಗಳಲ್ಲಿ ಕವಿಗೋಷ್ಠಿ ನಡೆಸುವ ಮೂಲಕ ಸರ್ಕಾರ ಕವಿಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಮುದ ನೀಡಿದ ಲಾವಣಿ ಪದ: ಶಾಲೆಯ ಮುಖ್ಯಾಧ್ಯಾಪಕ ಪ್ರಕಾಶಗೌಡ ಪಾಟೀಲ್ ಮಾತನಾಡಿ, ಕಾವ್ಯಲೋಕದ ಕವಿಗೋಷ್ಠಿಯಲ್ಲಿ ಎಲ್ಲರೂ ಭಾಗವಹಿಸಿ ಕಾವ್ಯ ವಾಚನ ಮಾಡಬೇಕು. ನಮ್ಮ ಶಾಲೆಯಲ್ಲಿ ಗೋಷ್ಠಿ ನಡೆದದ್ದು ನಮಗೆ ಸಂತಸ ತಂದಿದೆ ಎಂದು ಹೇಳಿ ರಮೇಶ ಗಬ್ಬೂರು ರಚಿಸಿದ ಲಾವಣಿ ಪದ ಹಾಡಿದರು. ಪೋಸ್ಟ್ ಮಾಸ್ಟರ್ ಈರಣ್ಣ ಭಾಗವಹಿಸಿದ್ದರು. ರಮೇಶ ಬನ್ನಿಕೊಪ್ಪ, ಸೋಮು ಕುದರಿಹಾಳ, ಕನಕಪ್ಪ ದಂಡಿನ್, ಜಗದೀಶ ಹಣವಾಳ, ಚಿದಾನಂದ ಕೀರ್ತಿ, ಯಲ್ಲಪ್ಪ ಕಲಾಲ್, ಸುಧಾತಾಯಿ ಬಡಿಗೇರ, ಮಹ್ಮದ್ಮಿಯಾ, ಶ್ರುತಿ ವೆರ್ಣೇಕರ್, ಶರಣಪ್ಪ ತಳ್ಳಿ, ನರ್ಮದಾಬಾಯಿ ಕುಲಕರ್ಣಿ, ಮಹಾದೇವ ಮೋಟಿ, ಸಂತೋಷ, ಬಸವರಾಜ ಯತ್ನಟ್ಟಿ, ವಿ.ಯು. ವೆರ್ಣೆಕರ್, ಗೋಪಿನಾಥ ದಿನ್ನಿ ಮತ್ತಿತರರು ಕಾವ್ಯ ವಾಚಿಸಿದರು.
ಸಂಘಟನೆ ಅಧ್ಯಕ್ಷ ಎಂ. ಪರಶುರಾಮ ಪ್ರಿಯ ಮಾತನಾಡಿ, ಕಾವ್ಯಲೋಕ ಸಂಘಟನೆ ಇನ್ನು ಮುಂದೆ ಪ್ರತಿ ವಾರ ಒಬ್ಬರ ಮನೆಯಲ್ಲಿ ಕಾಫಿ ಜತೆ ಕಾವ್ಯ ಗೋಷ್ಠಿ ಆರಂಭಿಸುತ್ತಿರುವುದಾಗಿ ತಿಳಿಸಿದರು. ಕಾರ್ಯದರ್ಶಿ ಶರಣಪ್ಪ ತಳ್ಳಿ ನಿರ್ವಹಿಸಿದರು. ಶಿಕ್ಷಕ ಸೋಮು ಕುದರಿಹಾಳ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.