ಶಿಕ್ಷಕರ ನೇಮಕಾತಿ ಸ್ಥಗಿತಗೊಳಿಸಿ
ಯಲಬುರ್ಗಾ: ಹೈದ್ರಾಬಾದ್-ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ 371 (ಜೆ) ಕಲಂ ಜಾರಿಯಾಗುವ ತನಕ ರಾಜ್ಯ ಸರ್ಕಾರ ಯಾವುದೇ ನೇಮಕಾತಿ ನಡೆಸಬಾರದು ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ತಾಲೂಕು ಘಟಕ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ಗೆ ಮನವಿ ನೀಡಿದರು.
ವೇದಿಕೆ ತಾಲೂಕಾಧ್ಯಕ್ಷ ಶಂಕರ ಉಳ್ಳಾಗಡ್ಡಿ ಮಾತನಾಡಿ, 3-4 ವರ್ಷಗಳಿಂದ ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಆಶಾಕಿರಣವಾದ ಹೈ-ಕ ವಿಶೇಷ ಮೀಸಲಾತಿ ಸೌಲಭ್ಯ ಅನುಷ್ಠಾನಗೊಳ್ಳುವ ಮುನ್ನವೇ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅದರಿಂದಾಗಿ ಈ ಭಾಗದವರಿಗೆ ಮತ್ತೆ ಅನ್ಯಾಯ ಮಾಡಿದಂತಾಗುತ್ತದೆ. ಸದ್ಯ ಯಾವುದೇ ನೇಮಕಾತಿ ಮಾಡಬೇಡಿ ಎಂದರು.
ವೇದಿಕೆ ಉಪಾಧ್ಯಕ್ಷ ಮಹಾಂತೇಶ ಬಂಡಿ ಮಾತನಾಡಿ, ಶಿಕ್ಷಣ ಸಚಿವರು ಕೂಡಲೇ ಪ್ರಾಥಮಿಕ ಶಾಲೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಹೆ-ಕಕ್ಕೆ ಪ್ರತ್ಯೇಕ ನೇಮಕಾತಿ ಸೌಲಭ್ಯ ಜಾರಿಗೊಳಿಸಿದಾಗ ಈ ಪ್ರದೇಶದ ಜನರಿಗೆ ನ್ಯಾಯ ಒದಗಿಸಬೇಕು. ನಿರ್ಲಕ್ಷಿಸಿದರೆ ಹೋರಾಟ ಮಾಡುವುದಾಗಿ ತಿಳಿಸಿದರು.
ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ಮನವಿ ಸ್ವೀಕರಿಸಿದರು. ರಾಜಶೇಖರ ಶ್ಯಾಗೋಟಿ, ಮಕಬುಲ್ಪಾಶಾ, ಕಂಠೆಪ್ಪ ಮುಧೋಳ, ಕಲ್ಲೇಶ ಕಲ್ಲೂರ, ಶೇಖಪ್ಪ ಬಂಡಿ, ಹನುಮಂತಪ್ಪ ಕೋನಸಾಗರ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.