ಸಂಗೀತ: ನಿಸರ್ಗ ಶಾಲೆ ಸಾಧನೆ
ಹನುಮಸಾಗರ: ಸ್ಥಳೀಯ ನಿಸರ್ಗ ಸಂಗೀತ ಶಾಲೆಯ ವಿದ್ಯಾರ್ಥಿಗಳು ಕೊಪ್ಪಳದ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ವಿನೋದಸಾ ಪಾಟೀಲ್ ಶೇ.86, ಗ್ಯಾನಪ್ಪ ತಳವಾರ ಶೇ. 76 ಅಂಕ ಗಳಿಸಿದ್ದಾರೆ.
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ವಿಜಯಲಕ್ಷ್ಮೀ ಹಂಚಿನಾಳ, ಪ್ರತಿಭಾ ತಮ್ಮಣ್ಣನವರ, ಸಿಂಧೂ ಕೊಪ್ಪದ, ವಾಣಿಶ್ರೀ ಎಂ., ಶ್ವೇತಾ ಉಪ್ಪಿನ, ಸಹನಾ ಹೂಗಾರ, ರಾಜಶೇಖರ ಕೊಪ್ಪಳ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಸರೋಜಮ್ಮ ಧುತ್ತರಗಿ ಮಾತನಾಡಿ, ವಿದ್ಯಾರ್ಥಿಗಳು ಸಂಗೀತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ನಮ್ಮ ಶಾಲೆ, ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದು ಸಂತಸಪಟ್ಟರು.
ಮಲ್ಲಯ್ಯ ಕೋಮಾರಿ, ಶ್ರೀದೇವಿ ಕೋಮಾರಿ, ಗಣ್ಯರಾದ ಎಲ್ಎನ್ ಜಹಗಿರದಾರ, ಶರಣಪ್ಪ ಅಗಸಿಮುಂದಿನ ಚಂದಪ್ಪ ತಳವಾರ, ಸಂಗಯ್ಯ ವಸ್ತ್ರದ, ವಿಠ್ಠಲ್ ಶ್ರೇಷ್ಟಿ ನಾಗೂರು, ಬಸವರಾಜ ಹಳ್ಳೂರು, ಪರಪ್ಪ ಕಾಳಗಿ, ಗದಿಗೆಪ್ಪ ಬ್ಯಾಳಿ, ಅಮರಯ್ಯ ವಿಭೂತಿ, ಕರಿಸಿದ್ಧಪ್ಪ ಕುಷ್ಟಗಿ, ವೀರೇಶ ಮೊಟಗಿ ಸಿದ್ಧಯ್ಯ ಬಾಳಿಹಳ್ಳಮಠ ಮತ್ತು ಪಾಲಕರು, ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.