ಉತ್ತಮ ಸಂಸ್ಕಾರದ ಅಗತ್ಯ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಫೆ. 13
ಸಂಸ್ಥಾನ ಶ್ರೀ ಗವಿಮಠದಲ್ಲಿ ಇತ್ತೀಚಿಗೆ 41ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಸೊಲ್ಲಾಪುರದ ಸಿಂಧೂತಾಯಿ ಕಾಡಾದಿ ಮಾತನಾಡಿ, ಮಾನವನ ಜೀವನವೇ ಸರ್ವ ಶ್ರೇಷ್ಠ. ಈ ಜೀವನಕ್ಕೆ ಉತ್ತಮ ಸಂಸ್ಕಾರದ ಅಗತ್ಯವಿದೆ. ಅಂತಹ ಸಂಸ್ಕಾರವನ್ನು ಶರಣರ ಸಂದೇಶಗಳ ಮೂಲಕ ನಾವೆಲ್ಲ ಪಡೆದುಕೊಳ್ಳಬೇಕಾಗಿದೆ. ಶರಣರ ಸಾಹಿತ್ಯದಲ್ಲಿ ಹಿರಿದಾದ ಮೌಲ್ಯಗಳಿವೆ. ಬೆಳಕಿನೆಡೆಗೆ ಕಾರ್ಯಕ್ರಮದ ಮೂಲಕ ಜನರಲ್ಲಿ ಸಂಸ್ಕಾರ ಮೂಡಿಸುತ್ತಿರುವ ಗವಿಮಠದ ಸೇವೆ ಶ್ಲಾಘನೀಯ ಎಂದರು. ಶ್ರೀ ಶಂಭುಲಿಂಗದೇವರು ಮಾತನಾಡಿ, ಶರಣರ ಸಾಹಿತ್ಯದಲ್ಲಿ ಅತ್ಯಮೂಲ್ಯ ಮೌಲ್ಯಗಳಿವೆ ಎಂದರು. ಪ್ರಗತಿ ಎ.ಪಿ. ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವೀರಪ್ಪ ಕೊಪ್ಪಳ ಅವರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ಭಕ್ತಿಸೇವೆ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.