ಬ್ಯಾಡ್ಮಿಂಟನ್: ಸಂತೋಷ-ಇಲಿಯಾಸ್ ಜೋಡಿ ಪ್ರಥಮ
ಗಂಗಾವತಿ: ಇಲ್ಲಿನ ಅಗ್ರಿ ಸ್ಪೋರ್ಟ್ಸ್ ಅಸೋಶಿಯೇಷನ್ ಆಶ್ರಯದಲ್ಲಿ ಫೆ. 10, 11ರಂದು ನಡೆದ ಅಂತರ್ ಜಿಲ್ಲಾ ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಂತೋಷ- ಇಲಿಯಾಸ್ ಜೋಡಿ ಪ್ರಥಮ ಸ್ಥಾನ ಗಳಿಸಿತು.
56 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಬಳ್ಳಾರಿಯ ಸಂತೋಷ ಮತ್ತು ಇಲಿಯಾಸ್ ಜೋಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ರು. 10 ಸಾವಿರ ಹಾಗೂ ಟ್ರೋಫಿ ಬಾಚಿಕೊಂಡಿತು.
ರನ್ನರ್ ಅಪ್ ಆದ ಗಂಗಾವತಿಯ ಈ. ಧನರಾಜ್ ಹಾಗೂ ರಾಜಶೇಖರ್ ಜೋಡಿ ರು. 6 ಸಾವಿರ ಹಾಗೂ ಟ್ರೋಫಿಗೆ ತೃಪ್ತಿಪಟ್ಟಿತು. ಗಂಗಾವತಿಯ ತಿಲಕ್ ಹಾಗೂ ವೆಂಕಟೇಶ ಜೋಡಿ ತೃತೀಯ ಸ್ಥಾನ ಗಳಿಸಿ ರು. 3 ಸಾವಿರ ಹಾಗೂ ಟ್ರೋಫಿ ಪಡೆಯಿತು.
ವಿಜೇತರಿಗೆ ಅಗ್ರಿ ಸ್ಪೋರ್ಟ್ಸ್ ಅಧ್ಯಕ್ಷ ಜಿ. ಪ್ರಸಾದ್, ಎಪಿಎಂಸಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಲಲಿತಾರಾಣಿ ಶ್ರೀರಂಗದೇವರಾಯಲು, ಮಾಜಿ ಶಾಸಕ ಜಿ. ವೀರಪ್ಪ ಪ್ರಶಸ್ತಿ ವಿತರಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.