ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಇಂದು ಬೀಳ್ಕೊಡುಗೆ

Parashurama
Updated On : 15 Feb 2013, 12:01 pm

ಯಲಬುರ್ಗಾ: ಇಲ್ಲಿನ ಭ್ರಮರಾಂಭ ಕಾಲೇಜು ಆವರಣದಲ್ಲಿ ಫೆ. 15ರಂದು ಬೆಳಗ್ಗೆ 10.30ಕ್ಕೆ ಶ್ರೀ ಮಹಾಸರಸ್ವತಿ ಪೂಜಾ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುವ ಸಮಾರಂಭ ಜರುಗಲಿದೆ. ಹಿರೇಮಠದ ಪೀಠಾಧಿಕಾರಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸ್ಥಳೀಯ ಪ್ರೌಢಶಾಲೆ ಶಿಕ್ಷಕಿ ಶಕುಂತಲಾ ಹುಬ್ಬಳ್ಳಿ ಉದ್ಘಾಟಿಸುವರು. ಸಿದ್ಧರಾಮ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಮಧಾಹ್ನ 3ಕ್ಕೆ ಮಹಿಳಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ನಡೆಯಲಿದೆ. ಅಮರಪ್ಪ, ಡಾ. ಶರಣಪ್ಪ ಕೊಪ್ಪಳ ಮತ್ತಿತರರು ಭಾಗವಹಿಸಲಿದ್ದಾರೆ. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಾಚಾರ್ಯ ಎ.ಎನ್. ಬಂಡಿಹಾಳ ತಿಳಿಸಿದ್ದಾರೆ.
ಇಂದು ವಾರ್ಷಿಕೋತ್ಸವ
ಯಲಬುರ್ಗಾ: ಇಲ್ಲಿನ ಮಂಜುನಾಥ ಶಿಕ್ಷಣ ಸಂಸ್ಥೆಯ ಮಹಾಸರಸ್ವತಿ ಪೂಜಾ ಹಾಗೂ ಬೀಳ್ಕೊಡುವ ಸಮಾರಂಭ ಫೆ. 15ರಂದು 10.30ಕ್ಕೆ ಜರುಗಲಿದೆ. ಸಂಸ್ಥೆ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಮುನಿಯಪ್ಪ ಹುಬ್ಬಳ್ಳಿ, ಶಾಲಾ ಮಂಡಳಿ ನಿರ್ದೇಶಕರಾದ ಶೇಖರಗೌಡ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಸುಭಾಶ ಹೊಂಬಳ, ವೀರಭದ್ರಪ್ಪ ಅಂಗಡಿ ಭಾಗವಹಿಸುವರು. ಅಂದು ಸಂಜೆ 6ಕ್ಕೆ ಮಂಜುನಾಥ ಶಿಕ್ಷಣ ಸಂಸ್ಥೆಯ ವಾರ್ಷೀಕ ಸ್ನೇಹ ಸಮ್ಮೇಳನ ಜರುಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement