ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ

Parashurama
Updated On : 15 Feb 2013, 12:00 pm

ಕಾರಟಗಿ:  ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೇವಿನಾಳ ಗ್ರಾಮದ ಮೂವರು ಮಕ್ಕಳು ಗುರುವಾರ ಹೊಸಪೇಟೆಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
ಬೇವಿನಾಳ ಗ್ರಾಮದ ಚಿದಾನಂದಪ್ಪ ಅಮರಮ್ಮ ಎಂಬುವರ ಮಗ ಶಶಿಧರ, ಮಾರ್ಕಂಡೆಪ್ಪ ಜಲದಮ್ಮ ಎಂಬುವರ ಮಗ ವಿಜಯಕುಮಾರ್ ಹಾಗೂ ಕನಕಪ್ಪ ದೇವಮ್ಮ ಎಂಬುವರ ಮಗ ಬಸವರಾಜ  ಮಂಗಳವಾರ ನಾಪತ್ತೆಯಾಗಿದ್ದರು.
ಮೂರು ದಿನಗಳ ಹಿಂದೆ ಶಾಲೆಗೆ ಹೋಗಿದ್ದ ಶಶಿಧರ ಸಂಜೆಯಾದರೂ ಮನೆಗೆ ಬರಲಿಲ್ಲ. ಇದರಿಂದ ಆತಂಕಕ್ಕೀಡಾದ ಪಾಲಕರು ಗ್ರಾಮ ಸೇರಿದಂತೆ ಸುತ್ತಲೂ ಹುಡುಕಿದರೂ ಆತನ ಸುಳಿವು ಸಿಗಲಿಲ್ಲ. ಇದೇ ಹೊತ್ತಿಗೆ ಶಶಿಧರನ ಜೊತೆ ಅದೇ ಶಾಲೆಯ ವಿಜಯಕುಮಾರ್ ಮತ್ತು ಬಸವರಾಜ ನಾಪತ್ತೆಯಾಗಿದ್ದು, ಗ್ರಾಮದ ತುಂಬೆಲ್ಲ ಹರಡಿ ಇಡೀ ಗ್ರಾಮವನ್ನು ಆತಂಕಕ್ಕೀಡು ಮಾಡಿತ್ತು. ಒಂದು ಹಂತದಲ್ಲಿ ಊಹಾಪೋಹ, ಗೊಂದಲಗಳಿಗೆ ಕಾರಣವಾಗಿ ಪಾಲಕರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು.
ಮಕ್ಕಳ ನಾಪತ್ತೆಯಿಂದ ಆಕ್ರೋಶಗೊಂಡ ಪಾಲಕರು ಶಿಕ್ಷಕರ ಮೇಲೆ ಹರಿಹಾಯ್ದಿದ್ದರು ಎನ್ನಲಾಗಿದೆ. ಸತತ ಎರಡು ದಿನಗಳ ಕಾಲ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗುರುವಾರ ಮಕ್ಕಳ ಕಣ್ಮರೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಹಿತಿ ತಿಳಿದ ಪಿಎಸ್‌ಐ ಶರಣುಗೌಡ, ಮಕ್ಕಳ ನಾಪತ್ತೆ ಕುರಿತು ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಹೊಸಪೇಟೆಯಲ್ಲಿ ಮಕ್ಕಳು ಪತ್ತೆಯಾಗಿದ್ದಾರೆಂದು ಪಾಲಕರನ್ನು ಸಮಾಧಾನಗೊಳಿಸಿದರೂ ಪಾಲಕರ ದುಃಖ ಕಡಿಮೆಯಾಗಲಿಲ್ಲ. ಸಂಜೆ ವೇಳೆಗೆ ಮಕ್ಕಳು ಠಾಣೆಗೆ ಬಂದಾಗ ಹೆತ್ತವರು ನಿಟ್ಟುಸಿರು ಬಿಟ್ಟರು.
ದುಡಿಯಲು ಹೋಗಿರುವುದಾಗಿ ಹೇಳುವ ಮೂವರು ಮಕ್ಕಳು, ಗಂಗಾವತಿ, ಆನೆಗೊಂದಿ, ಹಂಪಿಯಿಂದ ಹೊಸಪೇಟೆಗೆ ತೆರಳಿದ್ದೇವೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement