ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಶಿಕ್ಷಕರ ನೇಮಕಾತಿ ತಡೆಗೆ ಜಯಕರ್ನಾಟಕ ಸಂಘಟನೆ ಒತ್ತಾಯ

Parashurama
Updated On : 15 Feb 2013, 12:21 pm

ಗಂಗಾವತಿ: ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಮುಂದಾಗಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರ್ಕಾರ ಕೂಡಲೇ ನೇಮಕಾತಿಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಬಳ್ಳಾರಿ ರಾಮಣ್ಣ ನಾಯಕ, ಹೈದರಾಬಾದ್ ಕರ್ನಾಟಕ ಪ್ರದೇಶ ಶೈಕ್ಷಣಿಕ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಈ ಪ್ರದೇಶದ ಸಮಗ್ರ ಪ್ರಗತಿಗೆ 371ನೇ ಕಲಂ ತಿದ್ದುಪಡಿ ಮಾಡುವ ಮೂಲಕ ಪ್ರಾಶಸ್ತ್ಯ ನೀಡಿದೆ. ಆದರೆ, ಸರ್ಕಾರ ಈಗ ಶಿಕ್ಷಕರ ನೇಮಕಾತಿಗೆ ಮುಂದಾಗಿರುವುದರಿಂದ ಈ ಭಾಗದ ನಿರುದ್ಯೋಗಳು ಉದ್ಯೋಗದಿಂದ ವಂಚಿತರಾಗುತ್ತಾರೆ. ಹೀಗಾಗಿ, 371 ಕಲಂ ಸಂಪೂರ್ಣವಾಗಿ ಜಾರಿಯಾಗುವವರೆಗೂ ನೇಮಕಾತಿ ಪ್ರಕ್ರಿಯೆ ನಡೆಸಬಾರೆಂದು ಆಗ್ರಹಿಸಿದರು.
ಬಸ್ ನಿಲುಗಡೆಗೆ ಒತ್ತಾಯ: ದಾಸನಾಳ ಗ್ರಾಮ ರಾಜ್ಯ ಹೆದ್ದಾರಿ 63ಕ್ಕೆ ಹೊಂದಿಕೊಂಡಿದ್ದು, ಈ ಸ್ಥಳದಲ್ಲಿ ಸಾರಿಗೆ ಇಲಾಖೆಯ ಎಲ್ಲ ಬಸ್‌ಗಳನ್ನು ನಿಲ್ಲಿಸಬೇಕೆಂದು ಬಳ್ಳಾರಿ ರಾಮಣ್ಣ ನಾಯಕ ಒತ್ತಾಯಿಸಿದರು.
ಇಲ್ಲಿಂದಲೇ ಸಾಕಷ್ಟು ಜನರು ರೈಸ್ ಮಿಲ್ ಮತ್ತು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ಕಾರಣ ಈ ಪ್ರದೇಶದಲ್ಲಿ ಬಸ್‌ಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶರಣೇಗೌಡ ಮಾಲಿಪಾಟೀಲ, ನಾಗರಾಜ, ಮಲ್ಲಿಕಾರ್ಜನ ಕೋವಿ, ವೀರೇಶಕುಮಾರ, ನಿಂಗಪ್ಪ, ಮಾರ್ಕಂಡಯ್ಯ ರವಿಕುಮಾರ, ಪ್ರಶಾಂತ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement