ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಸಾಯಿಬಾಬಾ ಮೂರ್ತಿ ಮೆರವಣಿಗೆ

Parashurama
Updated On : 15 Feb 2013, 12:01 pm

ಕುಷ್ಟಗಿ: ಇಲ್ಲಿನ ಗಜೇಂದ್ರಗಡ ರಸ್ತೆಯ ದೇಸಾಯಿ ಲೇಔಟ್‌ನಲ್ಲಿ ನಿರ್ಮಿಸಲಾದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವ ಸಾಯಿಬಾಬಾ ಮೂರ್ತಿ ಮೆರವಣಿಗೆ ನಡೆಯಿತು.
ಗುರುವಾರ ಬೆಳಗ್ಗೆ ಇಲ್ಲಿನ ಸಣ್ಣ ನೀರಾವರಿ ಕಚೇರಿ ಬಳಿಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಆರಂಭವಾದ ಸಾಯಿಬಾಬಾ ಮೂರ್ತಿ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ನೂತನ ದೇವಸ್ಥಾನಕ್ಕೆ ತೆರಳಿತು. ಬೈಕ್ ರ್ಯಾಲಿ, ಕಲಾವಿದರ ಡೊಳ್ಳು ಕುಣಿತ, ಭಜನೆ ನಡೆದರೆ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಕಳೆ ತಂದುಕೊಟ್ಟರು.
ಪ್ರತಿಷ್ಠಾಪನೆ: ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ  ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಫೆ. 19ರಿಂದ 3ದಿನಗಳ ಕಾಲ ಜರುಗಲಿದೆ. ಫೆ. 19ರಂದು  ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement