ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೊಪ್ಪಳ

ಸ್ಥಳೀಯ ಸಂಸ್ಥೆಗಳಚುನಾವಣಾ ವೇಳಾಪಟ್ಟಿ

Parashurama
Updated On : 15 Feb 2013, 12:22 pm

ಕೊಪ್ಪಳ: ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಫೆ. 16ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಅಂದಿನಿಂದಲೇ ಪ್ರಾರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಫೆ. 23 ಕೊನೆಯ ದಿನವಾಗಿದೆ. ಫೆ. 25ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆ. 27 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನವು ಮಾ. 7ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರ ವರೆಗೆ ನಿಗದಿತ ಮತಗಟ್ಟೆಗಳಲ್ಲಿ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಮಾ. 9ರಂದು ನಡೆಸಲಾಗುವುದು. ಮತ ಎಣಿಕೆ ಮಾ. 11ರಂದು ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಮಾ. 11ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಫೆ. 15ರಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ನೀತಿ ಸಂಹಿತೆಯು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಮಾತ್ರ ಅನ್ವಯವಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಉಪಕಾರ್ಯದಶಿಗಳು ತಿಳಿಸಿದ್ದಾರೆ.
ನಾಳೆ ದತ್ತಿ ಉಪನ್ಯಾಸ
ಗಂಗಾವತಿ: ಶರಣ ಜೆ.ಬಸಪ್ಪ ಇವರ 9ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಬಸವಚೇತನ ಬಳಗ ಹಿರೇಜಂತಗಲ್ ಮತ್ತು ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ 50ನೇ ದತ್ತಿ ಉಪನ್ಯಾಸ ಕಾರ್ಯಕ್ರಮ ಫೆ. 16ರಂದು ಜರುಗಲಿದೆ. ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗುವ ಕಾರ್ಯಕ್ರಮವನ್ನು ಚೆನ್ನಮಲ್ಲಿಕಾರ್ಜುನ ಮಠದ ಟ್ರಸ್ಟಿ ಶರಣಬಸವರಾಜ ಸ್ವಾಮಿ ಅಯೋಧ್ಯ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆ.ಚೆನ್ನಬಸಯ್ಯಸ್ವಾಮಿ ವಹಿಸುವರು. ಪ್ರಾಸ್ತಾವಿಕವಾಗಿ ಬಸವಚೇತನ ಬಳಗದ ಅಧ್ಯಕ್ಷ ಜಿ. ಶಿವಲಿಂಗಪ್ಪ ಮಾತನಾಡಲಿದ್ದು, ಬಸವ ಚೇತನ ಬಳಗದ ಗೌರವ ಅಧ್ಯಕ್ಷ ಸಿ.ಎಚ್. ನಾರಿನಾಳ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಎಚ್. ಬಸಪ್ಪ, ಎ. ಸೋಮರಾಜು, ಎಚ್. ಪ್ರಭಾಕರ, ನಿಜಲಿಂಗಪ್ಪ ಮೆಣಸಗಿ, ಚಂದ್ರಶೇಖರ ನೂಲ್ವಿ, ಲಯನ್ ಎಫ್.ಎಚ್. ಚಿತ್ರಗಾರ, ಡಾ. ಪಂಪಾಪತಿ ಮಳಗಿ, ಬುಡನ್ ಮೀಯಾ, ಸುಮಿತ್ರಾ ಸುಧಾಕರ, ಸೈಯದ್ ಮಹ್ಮದ್ ಗುತ್ತಿ ಭಾಗವಹಿಸಲಿದ್ದಾರೆ ಎಂದು ಜಿ. ಶಿವಲಿಂಗಪ್ಪ ಮತ್ತು ಚಂದ್ರಶೇಖರ ನೂಲ್ವಿ ಕೋರಿದ್ದಾರೆ.
ವೇತನ ಮಂಜೂರು
ಕೊಪ್ಪಳ: ಜಿಲ್ಲೆಯ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿದ್ದ 1,180 ಶಿಕ್ಷಕರ ವೇತನ ಸಮಸ್ಯೆ ಕಳೆದ ನಾಲ್ಕಾರು ತಿಂಗಳಿಂದ ಉದ್ಭವಿಸಿದ್ದು, ಈಗ ಕೊಪ್ಪಳ ಜಿಲ್ಲಾ ಪಂಚಾಯಿತಿಗೆ ರು. 10.60 ಕೋಟಿ ಮಂಜೂರು ಮಾಡಲಾಗಿದೆ. ಅದನ್ನು ನಾಲ್ಕು ತಾಲೂಕು ಪಂಚಾಯಿತಿಗಳಿಗೆ ಹಂಚಿಕೆ ಮಾಡಿ ಎರಡು ದಿನಗಳಲ್ಲಿ ಎಸ್‌ಎಸ್‌ಎ ಶಿಕ್ಷಕರ ವೇತನ ಪಾವತಿಯಾಗುತ್ತ್ತದೆ. ವೇತನ ಮಂಜೂರಾತಿಗೆ ಪ್ರಯತ್ನಿಸಿದ ಎಲ್ಲರಿಗೂ ಎಸ್‌ಎಸ್‌ಎ ಶಿಕ್ಷಕರ ಸಂಘ ಅಭಿನಂದನೆ ಸಲ್ಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement