ಆನ್ಸಾರಿ ಆಗೆ... ಪರಣ್ಣ ಪೀಛೆ... ಶ್ರೀನಾಥ ತ್ರಿಶಂಕು ಸ್ಥಿತಿ
ಜಿಲ್ಲೆಯ ರಾಜಕೀಯ ಕೇಂದ್ರ ಸ್ಥಾನ ಹಾಗೂ ವಾಣಿಜ್ಯ ನಗರ ಎಂದೇ ಕರೆಯುವ ಗಂಗವಾವತಿಯಲ್ಲಿ ಈ ಸಾರಿ ನಗರಸಭೆಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತೆ ಕಮಾಲ್ ಮಾಡಿ, ಜೆಡಿಎಸ್ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 31 ಸ್ಥಾನಗಳ ಪೈಕಿ 16 ಸ್ಥಾನಗಳಲ್ಲಿ ಜೆಡಿಎಸ್ ಜಯ ಗಳಿಸಿದ್ದರೆ ಇದೆಲ್ಲ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಏಕಾಂಗಿ ಹೋರಾಟದ ಫಲವೇ ಆಗಿದೆ. ಜೆಡಿಎಸ್ನ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದರೂ ಎಲ್ಲಿಯೂ ಪ್ರಚಾರಕ್ಕೆ ಹೋಗದೆ ಸ್ಥಳೀಯ ನಗರಸಭೆಯನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಮಾಡಿ, ಯಶಸ್ವಿಯಾಗಿದ್ದಾರೆ. ಇನ್ನು ಸಂಸದ ಶಿವರಾಮಗೌಡ ತಮ್ಮ ಪುತ್ರನನ್ನು ಕೆಜೆಪಿಗೆ ಕಳುಹಿಸಿ, ತಾವು ಬಿಜೆಪಿಯಲ್ಲಿ ಉಳಿದಿರುವುದು ಎರಡು ದಡದ ಮೇಲೆ ಕಾಲಿಟ್ಟಂತಾಗಿದೆ. ಆದರೆ, ಶಾಸಕ ಪರಣ್ಣ ಮುನವಳ್ಳಿ ಶತಾಯಗತಾಯ ಯತ್ನಿಸಿದರೂ ಬಿಜೆಪಿಯನ್ನು ಕೇವಲ ನಾಲ್ಕು ಸ್ಥಾನಗಳಲ್ಲಿ ಗೆಲ್ಲಿಸಲು ಸಾಧ್ಯವಾಗಿದೆ. ಹೀಗಾಗಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಅದೇ ರೀತಿ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಣಕ್ಕೆ ಇಳಿದಿದ್ದ ವಿಧಾನ ಪರಿಷಥ್ ಸದಸ್ಯ ಎಚ್.ಆರ್. ಶ್ರೀನಾಥ ಕಾಂಗ್ರೆಸ್ ಪಕ್ಷ 9 ಸ್ಥಾನಗಳಲ್ಲಿ ಜಯಭೇರಿ ಬಾರಿಸುವುದಕ್ಕೆ ಕಾರಣರಾಗಿದ್ದಾರೆ. ಇದು ಕಳೆದ ಸಾರಿಗಿಂತ ಉತ್ತಮವಾಗಿದೆ. ಆದರೂ ಸ್ಪಷ್ಟತೆ ಇಲ್ಲ. ಹೀಗಾಗಿ, ಎಚ್.ಆರ್. ಶ್ರೀನಾಥ ಅವರದ್ದು ತ್ರಿಶಂಕು ಸ್ಥಿತಿ ಎನ್ನುವಂತಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.