ಕರಡಿಗೆ ಕಟ್ಟೆಚ್ಚರ ಬಸುಗಿಲ್ಲ ಬಿಂದಾಸ್ ಜೆಡಿಎಸ್ ಬುಡಮೇಲು
ಜಿಲ್ಲಾ ಕೇಂದ್ರ ಕೊಪ್ಪಳ ನಗರಸಭೆಗೆ ನಡೆದ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಈ ಫಲಿತಾಂಶ ಮೇಲೆಯೇ ವಿಶ್ಲೇಷಣೆ ಮಾಡಲಾಗುತ್ತಿದೆ. ಸ್ಥಳೀಯ ಶಾಸಕ ಸಂಗಣ್ಣ ಕರಡಿಗೆ ಕಟ್ಟೆಚ್ಚರ ಎನ್ನುವಂತಾ ಗಿದ್ದರೆ ಮಾಜಿ ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ್ ಬಿಂದಾಸ್ ಎನ್ನುವಂತಿಲ್ಲ. ಜೆಡಿಎಸ್ ಅಂತೂ ಬುಡಮೇಲಾಗಿದೆ. ಬಿಎಸ್ಆರ್ ಖಾತೆ ತೆರೆದಿದ್ದರೆ ಕೆಜೆಪಿ ಧೂಳಿಪಟವಾಗಿದೆ. 31ರಲ್ಲಿ 13 ಸ್ಥಾನಗಳಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್ ಕೊಂಚ ಏರಿಕೆಯನ್ನೇನೋ ಕಂಡಿದೆ. ಕಳೆದ ಸಾರಿ 11 ಸ್ಥಾನಗಳಿದ್ದದ್ದು, 13 ಆಗಿದೆ. ಇನ್ನು ಬಿಜೆಪಿ 3 ಇದ್ದಿದ್ದು 11 ಆಗಿದೆಯಾದರೂ ನಿರೀಕ್ಷೆಯಂತೆ ಆಗಿಲ್ಲ. ಕಳೆದ ಸಾರಿ 16 ಇದ್ದ ಜೆಡಿಎಸ್ ಪಕ್ಷ ಈ ಸಾರಿ ಕೇವಲ 3 ಸ್ಥಾನಗಳಲ್ಲಿ ಗೆದ್ದಿದೆ. ಪಕ್ಷೇತರರು 3 ಸ್ಥಾನಗಳಲ್ಲಿ ಗೆದ್ದಿದ್ದರೆ ಬಿಎಸ್ಆರ್ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿದೆ. ಶಾಸಕ ಸಂಗಣ್ಣ ಕರಡಿ ಬಿಜೆಪಿಗೆ ಜಯ ದೊರಕಿಸಿ ಕೊಡಲು ಸಾಧ್ಯವಾಗಿಲ್ಲ, ಹೀಗಾಗಿ ಅವರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ಇನ್ನು ಕಾಂಗ್ರೆಸ್ ಪರ ಬಿರುಗಾಳಿ ಇದೆ ಎನ್ನುವ ಸಮಯದಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ ವಿಫಲರಾಗಿದ್ದಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಎಡವಿದ್ದರಿಂದಲೇ ಕಾಂಗ್ರೆಸ್ಗೆ ಅವಕಾಶ ಇಲ್ಲದಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.