ಬಾಲಕಿ ಮೇಲೆ ಅತ್ಯಾಚಾರ
ಕನ್ನಡಪ್ರಭ ವಾರ್ತೆ, ಕೆಜಿಎಫ್, ಮಾ.25
ಬಾಲಕಿಯನ್ನು ಪ್ರೀತಿಸಿದ್ದ ಯುವಕನೊಬ್ಬ ಆಕೆಯನ್ನು ಬಲವಂತವಾಗಿ ಕರೆದೊಯ್ದು ಮದುವೆ ಮಾಡಿಕೊಂಡು, ಅತ್ಯಾಚಾರ ನಡೆಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.
ರಾಬರ್ಟ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಉದಯನಗರದ ಬಾಲಕಿ ಮತ್ತು ಕಲ್ಲಿಕೊತ್ತೂರು ನಿವಾಸಿ ವೆಂಕಟೇಶ್ ಅವರ ಪುತ್ರ ಮದನ್ಕುಮಾರ್ ಇಬ್ಬರೂ ಬಂಗಾರಪೇಟೆಯ ಭಾರತ್ ಪಾಲಿಟೆಕ್ನಿಕ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇಬ್ಬರೂ ಮದುವೆ ಮಾಡಿಕೊಳ್ಳೋಣ ಎಂದು 6 ತಿಂಗಳಿಂದ ಮದನ್ಕುಮಾರ್ ಬಾಲಕಿಯನ್ನು ಪೀಡಿಸುತ್ತಿದ್ದ. ಇದಕ್ಕೆ ಬಾಲಕಿ ನಿರಾಕರಿಸಿದ್ದರೂ ಸುಮ್ಮನಾಗದ ಯುವಕ ತನ್ನ ಸ್ನೇಹಿತರಾದ ರಾಜೇಶ್ ಮತ್ತು ಸುನೀಲ್ ಅವರ ಮೂಲಕ ಬಾಲಕಿಯನ್ನು ಒಪ್ಪಿಸುವಂತೆ ಸಂಧಾನ ನಡೆಸಿದ್ದರು. ಮಾ.19ರಂದು ನಗರದ ಬಸ್ ನಿಲ್ದಾಣಕ್ಕೆ ಬಾಲಕಿಯನ್ನು ಬರುವಂತೆ ಹೇಳಿದ್ದರು.
ಬಾಲಕಿಯನ್ನು ಬಲವಂತವಾಗಿ ಸುನೀಲ್, ರಾಜೇಶ್ ಕರೆದುಕೊಂಡು ಹೋಗಿ ತಮಿಳುನಾಡಿನ ಚೆನ್ನೈನಲ್ಲಿರುವ ಸ್ನೇಹಿತ ಸುನೀಲ್ಕುಮಾರ್ ಅವರ ಸಂಬಂಧಿಕರ ಮನೆಯಲ್ಲಿರಿಸಿದ್ದರು. ಅಲ್ಲಿಯೇ ಮದುವೆ ಮಾಡಿಕೊಂಡು ನನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ.
ಬಾಲಕಿ ನೀಡಿದ ದೂರಿನ ಮೇರೆಗೆ ಪಿಎಸ್ಐ ಎಲ್.ಆಂಜಪ್ಪ ಮದನ್ಕುಮಾರ್, ಸುನೀಲ್ ಮತ್ತು ರಾಜೇಶ್ ಅವರ ವಿರುದ್ಧ ಅತ್ಯಾಚಾರ ಮತ್ತು ಬಾಲಕಿ ಅಪಹರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.