ಕೊಪ್ಪಳ

ಮಕ್ಕಳು 200, ಶಿಕ್ಷಕರು 3

ಕನ್ನಡಪ್ರಭ ವಾರ್ತೆ, ಕಾರಟಗಿ, ಜೂ. 25
ಸುಸಜ್ಜಿತ ಕಟ್ಟಡ, ವಿಶಾಲ ಮೈದಾನ ಸಕಲ ವ್ಯವಸ್ಥೆ ಇರುವ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಇನ್ನೂರು. ಆದರೆ, ಕಲಿಸುವವರು ಮಾತ್ರ ಮೂವರು!
ಹೌದು ಇಲ್ಲಿಗೆ ಸಮೀಪದ ಮೈಲಾಪುರ ಗ್ರಾಮದ ಸರ್ಕಾರಿ ಶಾಲೆಯ ಕತೆ ಇದು. ಯಾವುದೋ ಕುಗ್ರಾಮದಲ್ಲಿನ ಶಾಲೆಗಳಿಗೆ ಶಿಕ್ಷಕರು ಹೋಗಿ ಕೆಲಸ ಮಾಡುತ್ತಿಲ್ಲ ಎನ್ನುವ ಮಾತು ಇತ್ತು. ಅದರೆ ಸಕಲ ವ್ಯವಸ್ಥೆ ಇರುವ ಮೈಲಾಪುರದಿಂದ ಕೇವಲ 5 ಕಿಮೀ ದೂರದಲ್ಲಿ ವಾಣಿಜ್ಯ ಪಟ್ಟಣ ಕಾರಟಗಿ ಇದೆ. ಇಂಥ ಸ್ಥಿತಿಯಲ್ಲಿಯೂ ಈ ಸರ್ಕಾರಿ ಶಾಲೆಗೆ ಇನ್ನೂರಕ್ಕೂ ಹೆಚ್ಚು ಮಕ್ಕಳು ಕಲಿಯಲು ಬರುತ್ತಿದ್ದರೆ ಕಲಿಸಬೇಕಾದವರ ಸಂಖ್ಯೆಯೂ ಅದಕ್ಕೆ ಅನುಗುಣವಾಗಿ ಇರಬೇಕು. ಆದರೆ ಈಗಿರುವ ಶಿಕ್ಷಕರ ಸಂಖ್ಯೆ ಕೇವಲ 3.
ಈಗಿರುವ ಮೂವರು ಶಿಕ್ಷಕರಲ್ಲಿ ಪ್ರಭಾರಿ ಮುಖ್ಯಗುರುಗಳು 1ರಿಂದ 3ನೇ ತರಗತಿಯವರೆಗಿನ ನಲಿಕಲಿ ತರಗತಿಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಈಗ ಪ್ರವೇಶಾತಿ, ಟಿಸಿ, ಸರ್ಟಿಫಿಕೆಟ್, ಶುಲ್ಕ, ಶಾಲಾಭಿವೃದ್ಧಿ, ಶಿಕ್ಷಣ ಇಲಾಖೆ ಸಭೆ, ತರಬೇತಿಗಳಲ್ಲಿ ಭಾಗವಹಿಸಿ ತರಗತಿಗೆ ಬರುವುದರಲ್ಲಿ ಅಂದಿನ ವೇಳೆ ಮುಗಿಯುತ್ತದೆ.
ಇನ್ನು 4 ಮತ್ತು 5ನೇ ತರಗತಿಯನ್ನು ಒಬ್ಬ ಶಿಕ್ಷಕರು ನೋಡಿಕೊಳ್ಳುತ್ತಾರೆ. 6 ಮತ್ತು 7ನೇ ತರಗತಿಗೆ ಮತ್ತೊಬ್ಬರು. ಅದು ಎಲ್ಲ ತರಗತಿಯ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಹಾಕಿ ಕಲಿಸಬೇಕಾದ ಪರಿಸ್ಥಿತಿ. ಒಂದು ವರ್ಷದಿಂದ ಪ್ರಾರಂಭವಾಗಿರುವ ಶಾಲೆಯಲ್ಲಿ ಒಟ್ಟು ನಾಲ್ವರು ಕೆಲಸ ಮಾಡಬೇಕು. ಈಗ ಒಬ್ಬರು ಹೆರಿಗೆ ರಜೆಗೆ ತೆರಳಿದ್ದಾರೆ. ಹೀಗಾಗಿ ಇರುವ ಕೆಲಸ ಭಾರವೆಲ್ಲ ನಮ್ಮ ಮೇಲೆಯೇ ಇದೆ ಎನ್ನುತ್ತಾರೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು.
ಗ್ರಾಮಕ್ಕೆ ಈ ಶಾಲೆ ಮಂಜೂರಾಗಿದ್ದು 1951-52ರಲ್ಲಿ. ಆದರೆ 62 ವರ್ಷದಿಂದ ಈ ಶಾಲೆ ಒಬ್ಬ ಪೂರ್ಣ ಪ್ರಮಾಣದ ಮುಖ್ಯೋಪಾಧ್ಯಾಯರನ್ನು ಕಂಡಿಲ್ಲ. ಇದನ್ನು ನೋಡಿದರೆ ಗಂಗಾವತಿಯಲ್ಲಿ ಬ್ಲಾಕ್ ಶಿಕ್ಷಣಾಧಿಕಾರಿಗಳ ಕಚೇರಿ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. 250ಕ್ಕೂ ಹೆಚ್ಚು ಮಕ್ಕಳಿದ್ದು, ಶಿಕ್ಷಣ ಇಲಾಖೆ ಹಾಕಿಕೊಂಡ ಮಾರ್ಗಸೂಚಿಯಂತೆ 10ಕ್ಕೂ ಹೆಚ್ಚು ಶಿಕ್ಷಕರು ಇರಬೇಕು. ಆ ಪೈಕಿ ಅರ್ಧದಷ್ಟು ಶಿಕ್ಷಕರು ಇಲ್ಲಾ ಎಂದರೆ ಹೇಗೆ ಎನ್ನುವ ಪ್ರಶ್ನೆ ಕಾಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!