ಕ.ಪ್ರ.ವಾರ್ತೆ ಮದ್ದೂರು ಮಾ.8
ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಲಿಂಗ ಅವರು 2013-14ನೇ ಸಾಲಿನಲ್ಲಿ 7,52,922 ರು.ಗಳ ಉಳಿತಾಯ ಬಜೆಟ್ ಮಂಡಿಸಿದರು.
ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಶಿವಲಿಂಗ, 75,29,220 ರು.ಗಳ ಆದಾಯ ನಿರೀಕ್ಷೆ ಹಾಗೂ 6,95,1220 ರು.ಗಳ ಖರ್ಚು ಸೇರಿ 7,52,9220 ರು.ಗಳ ಉಳಿತಾಯ ಬಜೆಟ್ ಮಂಡನೆ ಮಾಡಿದರು.
ಆದಾಯ ಮೂಲಗಳು: ಮನೆ ಕಂದಾಯ ಹಾಗೂ ಕೈಗಾರಿಕೆ ವಲಯಗಳ ತೆರಿಗೆಗಳಿಂದ 2,43,9220 ರು., ಗ್ರಾಪಂ ಆಸ್ತಿ ಮತ್ತು ಅಧಿಕಾರದಿಂದ ಇರತಕ್ಕ ರಾಜಸ್ವ ತೆರಿಗೆ 1,01,2000 ರು., ಗ್ರಾಪಂ ಆಸ್ತಿಯಿಂದ ಬರತಕ್ಕ ರಾಜಸ್ವ ಗ್ರಾಪಂ ಶಾಸನಬದ್ಧ ಅಧಿಕಾರದಿಂದ ಬರತಕ್ಕ ರಾಜಸ್ವ ತೆರಿಗೆ 8 ಲಕ್ಷ.
ಅನುದಾನ ಮತ್ತು ವಂತಿಗೆ, ನೀರು, ಇಂದಿರಾ ಆವಾಸ್ ಯೋಜನೆ ಮತ್ತು ಎಂಜಿಎನ್‌ಆರ್‌ಇಜಿ 27 ಸಾವಿರ ರು. ಸ್ವೀಕೃತಿಗಳು 5 ಲಕ್ಷ 78 ಸಾವಿರ ರು ಸೇರಿ ಒಟ್ಟಾರೆ 7,52,9220 ರು. ಆದಾಯ ನಿರೀಕ್ಷಿಸಲಾಗಿದೆ ಎಂದರು.
ನಿರೀಕ್ಷಿತ ಖರ್ಚು: ಸಾಮಾನ್ಯ ಆಡಳಿತ ಗ್ರಾಪಂ ಚುನಾಯಿತ ಸಂಸ್ಥೆಯಿಂದ 70 ಸಾವಿರ, ಗ್ರಾಪಂ ಕಚೇರಿ 4.98 ಲಕ್ಷ, ಅಭಿವೃದ್ಧಿ ಆಡಳಿತ, ಕುಡಿವ ನೀರು 5.83 ಲಕ್ಷ, ಗ್ರಾಮೀಣ ನೈರ್ಮಲ್ಯ 6.80, ಜನಾರೋಗ್ಯ ಮತ್ತು ಕುಟುಂಬ ಕಲ್ಯಾಣ 4.25 ಲಕ್ಷ, ರಸ್ತೆ, ಸೇತುವೆ ಮತ್ತು ಇತರೆ ಸಂಪರ್ಕ ಮಾರ್ಗಗಳಿಗೆ 5 ಲಕ್ಷ ರು.
ನಿರ್ಮಾಣ ಮತ್ತು ನಿರ್ವಹಣೆ 2.80 ಲಕ್ಷ, ಕಟ್ಟಡಗಳ ನಿರ್ಮಾಣ 3 ಲಕ್ಷ, ನಿರ್ವಹಣೆ 3.50 ಲಕ್ಷ, ವಿದ್ಯುತ್ವೀಕರಣ ಮತ್ತು ವಿದ್ಯುತ್ ಪೂರೈಕೆ 35 ಸಾವಿರ, ಸಂಪ್ರದಾಯವಲ್ಲದ ಇಂಧನ ಮೂಲಗಳ ವೃದ್ಧಿ 10 ಸಾವಿರ, ನೀರು ಸರಬರಾಜು ಯೋಜನೆಗೆ 10 ಸಾವಿರ, ಇಂದಿರಾ ಆವಾಸ್ ಯೋಜನೆಗೆ 90 ಸಾವಿರ, ಉದ್ಯೋಗ ಖಾತ್ರಿಗೆ 15 ಲಕ್ಷ, ಉಪಕರಣಗಳ ಪಾವತಿ 5.75 ಲಕ್ಷ ರು.ಗಳು ಎಂದು ಶಿವಲಿಂಗ ತಿಳಿಸಿದರು.
ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ರಾಮಚಂದ್ರಚಾರಿ, ಸಾಯಿ ಪ್ರಸನ್ನ, ಶ್ರೀಕಂಠ, ನಾಗರತ್ನ, ಪದ್ಮಾವತಿ, ಪಾರ್ವತಿ, ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ, ಕಾರ್ಯದರ್ಶಿ ಚಂದ್ರು, ರಾಮು, ಶಿವರಾಜು ಹಾಜರಿದ್ದರು.