ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 11
ದಶಕಗಳ ಕಾಲ ರಾಜ್ಯದ ಹಿಂದುಳಿದ ವರ್ಗದವರ, ನೊಂದವರ ಪರ ಹೋರಾಟ ಮಾಡಿ ಈಗ ಮುಖ್ಯಮಂತ್ರಿ ಹುದ್ದೆಗೇರುತ್ತಿರುವ ಸಿದ್ದರಾಮಯ್ಯ ಅವರಿಂದ ಜನತೆಗೆ ಸಾಮಾಜಿಕ ನ್ಯಾಯ ದೊರೆಯುವುದರ ಜತೆಗೆ ಉತ್ತಮ ಆಡಳಿತ ಸಿಗಲಿದೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಜಿ.ಎಂ. ಹೇಮಂತ್ ಹೇಳಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಡಿ. ದೇವರಾಜ ಅರಸ್ ಅವರ ಗುಣಗಳನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯ ದಕ್ಷ ಆಡಳಿತಗಾರರಾಗಿದ್ದು, ಇವರ ಅಧಿಕಾರಾವಧಿಯಲ್ಲಿ ರಾಜ್ಯ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆಯಲ್ಲದೆ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಉತ್ತಮ ಮನ್ನಣೆ ದೊರೆಯಲಿದೆ ಎಂದು ಅರುಣ್ಕುಮಾರ್, ಜಿ.ಎನ್. ಮಂಜುನಾಥ್, ಕೆಂಪರಾಜು ತಿಳಿಸಿದ್ದಾರೆ.