ಮೈಸೂರು: ಕೇಂದ್ರ ಸರ್ಕಾರವು ಮಾರಾಟ ಉತ್ತೇಜನ ಕೈಗಾರಿಕಾ ತ್ರಿಪಕ್ಷೀಯ ಸಮಿತಿ ರದ್ದುಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಔಷಧ ಮಾರಾಟ ಪ್ರತಿನಿಧಿಗಳ ಸಂಘದವರು ಮಂಗಳವಾರ ಪ್ರತಿಭಟಿಸಿದರು. ನಗರದ ರಾಮಸ್ವಾಮಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅವರು, ತ್ರಿಪಕ್ಷೀಯ ಸಮಿತಿ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಯುಪಿಎ ಸರ್ಕಾರವು ಕೈಗಾರಿಕಾ ತ್ರಿಪಕ್ಷೀಯ ಸಮಿತಿಯನ್ನು ಮಾರಾಟ ಅಭಿವೃದ್ಧಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸ್ಥಾಪಿಸಿತ್ತು. ಆದರೆ, ಎನ್ಡಿಎ ಸರ್ಕಾರವು ಸಮಿತಿಯನ್ನು ರದ್ದುಗೊಳಿಸುವ ಮೂಲಕ ಅಘಾತ ನೀಡಿದೆ ಎಂದು ಕಿಡಿಕಾರಿದರು. ಸಂಘದ ಮೈಸೂರು ಶಾಖೆಯ ಕಾರ್ಯದರ್ಶಿ ಎಂ.ಎನ್. ಲಕ್ಷ್ಮೀಶ ನೇತೃತ್ವ ವಹಿಸಿದ್ದರು.