ಮೈಸೂರು

ಅಖಿಲ ಭಾರತ ವಾಕ್- ಶ್ರವಣ ಸಂಸ್ಥೆಗೀಗ ಸುವರ್ಣ ಸಂಭ್ರಮ

 ಡಿ.ಎನ್. ಮಹೇಂದ್ರ
ಮೈಸೂರು: ನಗರದ ಪ್ರತಿಷ್ಠಿತ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಈಗ ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದಡಿ 1965 ರಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆಯು ಈಗ ಸ್ವಾಯತ್ತ ಸಂಸ್ಥೆಯಾಗಿ, 49 ವರ್ಷ ಪೂರೈಸಿ 50ನೇ ವರ್ಷಕ್ಕೆ ಕಾಲಿಟ್ಟಿದೆ. ಭಾರತದಲ್ಲಿಯೆ ವಿಶಿಷ್ಟ ಪ್ರಯೋಗ ಮತ್ತು ಸಾಧನೆಗೆ ಹೆಸರಾದ ಈ ಸಂಸ್ಥೆಯು ವೃತ್ತಿಪರ ತರಬೇತಿ ನೀಡುವುದು, ರೋಗಿಗಳಿಗೆ ಅಗತ್ಯ ಸೇವೆ ಒದಗಿಸುವುದು, ಸಂಶೋಧನೆ ಹಾಗೂ ಸಫಲ ಸಂವಹನಕ್ಕೆ ತಡೆಯುಂಟು ಮಾಡುವ ತೊಂದರೆಗಳಾದ ಶ್ರವಣದೋಷ, ಬುದ್ಧಿಮಾಂದ್ಯತೆ, ಧ್ವನಿ, ತಡೆಯಿಲ್ಲದೆ ಮಾತನಾಡುವ ಮತ್ತು ಶಬ್ದಗಳು ಹಾಗೂ ಭಾಷೆಯ ಬಗ್ಗೆ ಜನರಲ್ಲಿ ಅರಿವುಂಟು ಮಾಡಿಸುವ ಉದ್ದೇಶವನ್ನು ಹೊಂದಿದೆ.
1965 ರಲ್ಲಿ ಅಂದಿನ  ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ಅವರಿಂದ ಶಿಲಾನ್ಯಾಸಗೊಂಡು ಸ್ನಾತಕೋತ್ತರ ಪದವಿಯಿಂದ ಪ್ರಾರಂಭಿಸಲ್ಪಟ್ಟು ಈಗ ವಿಸ್ತರಣೆ ಹೊಂದಿದೆ. ಈಗ ಅನೇಕ ಸರ್ಟಿಫಿಕೇಟ್ ಕೋರ್ಸ್ಗಳು, ಡಿಪ್ಲೊಮೊ ಶಿಕ್ಷಣ, ಡಿಪ್ಲೊಮೊ ಇನ್ ಹಿಯರಿಂಗ್ ಆಂಡ್ ಇಯರ್ಮೋಲ್ಡ್ ಟೆಕ್ನಾಲಜಿ, ಡಿಪ್ಲೊಮೋ ಇನ್ ಯಂಗ್ ಹಿಯರಿಂಗ್ ಇಂಪೇರ್ಡ್ ಚಿಲ್ಡ್ರನ್, ಡಿಪ್ಲೊಮೋ ಇನ್ ಹಿಯರಿಂಗ್ ಲ್ಯಾಂಗ್ವೇಜ್ ಮತ್ತು ಸ್ಪೀಚ್ - ತ್ರೂ ಡಿಸ್ಟೆನ್ಸ್ ಮೋಡ್, ಪದವಿ ಶಿಕ್ಷಣದಲ್ಲಿ ಬಿಎಸ್ಸಿ ಇನ್ ಸ್ಪೀಚ್ ಅಂಡ್ ಹಿಯರಿಂಗ್, ಬಿಎಸ್ಸಿ. ಬಿಇಡಿ ಇನ್ ಹಿಯರಿಂಗ್ ಇಂಪೇರ್ಮೆಂಟ್, ಸ್ನಾತಕೋತ್ತರ ಡಿಪ್ಲೊಮೋ, ಎಂಎಸ್ಸಿ ಇನ್ ಆಡಿಯಾಲಜಿ, ಎಂ.ಎಸ್ಸಿ ಇನ್ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ, ಎಂ.ಎಸ್ಸಿ.ಇಡಿ ಇನ್ ಹಿಯರಿಂಗ್ ಇಂಪೇರ್ಮೆಂಟ್ ಸೇರಿದಂತೆ ಹಲವು ಕೋರ್ಸ್ಗಳನ್ನು ಹೊಂದಿದೆ.
ಎಲ್ಲಾ ವಯಸ್ಸಿನವರಿಗೂ: ಸಂಸ್ಥೆಯು ಸಂವಹನ ನ್ಯೂನತೆ ವ್ಯಾಪ್ತಿಯ ಎಲ್ಲಾ ವಯಸ್ಸಿನವರ ಸಮಸ್ಯೆಗೂ ಸ್ಪಂದಿಸುತ್ತಿದೆ. ಸಂಸ್ಥೆಯು ಭಾರತದ ವಿವಿಧ ರಾಜ್ಯ ಹಾಗೂ ಪ್ರಪಂಚದೆಲ್ಲೆಡೆಯಿಂದ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಕಳೆದ 43 ವರ್ಷಗಳಲ್ಲಿ ಶ್ರವಣ ದೋಷ ಮತ್ತು ಮಾತಿನ ತೊಂದರೆಗಳ ರೋಗನಿವಾರಣಾ ತಂತ್ರಗಳು ಹಾಗೂ ಅವುಗಳ ವಿಶೇಷ ವಿದ್ಯಾಭ್ಯಾಸವನ್ನು ಕುರಿತಂತೆ ಹೆಚ್ಚು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದೆ. ಸಂವಹನ ನ್ಯೂನತೆಗಳಿಂದ ಬಳಲುತ್ತಿರುವ ಪ್ರತಿಯೊಬ್ಬರನ್ನೂ ತಲುಪಲು ಸಂಸ್ಥೆ ಮುಂದಾಗಿದೆ.
ಇದುವರೆಗೆ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿನಿರತರಾಗಿ ಮತ್ತು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಲ್ಲದೆ 40 ಮಂದಿ ವಿದ್ಯಾರ್ಥಿಗಳು ಪಿಎಚ್ಡಿ ಪದವಿ ಪಡೆದಿದ್ದಾರೆ. ಸಂಸ್ಥೆಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಇದರ ಅಧ್ಯಕ್ಷಾರಗಿದ್ದು, ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಉಪಾಧ್ಯಕ್ಷರಾಗಿದ್ದಾರೆ.
ಸಂಶೋಧನಾ ಯೋಜನೆ: ಎಐಐಎಸ್ಎಚ್ ಸಂಶೋಧನಾ ಯೋಜನೆಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಾದ ಎನ್ಸಿಇಆರ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ವಿದ್ಯುನ್ಮಾನ ವಿಭಾಗ, ಯುಎನ್ಐಸಿಇಎಫ್, ಡಬ್ಲ್ಯೂಎಚ್ಒ ಮತ್ತು ಹೆಲ್ಪ್ ಏಜ್ ಅಂತಾರಾಷ್ಟ್ರೀಯ ಸಂಸ್ಥೆ ಹಣಕಾಸು ಒದಗಿಸುತ್ತದೆ.
ಕಳೆದ ಐದು ವರ್ಷಗಳಲ್ಲಿ ಕಿವುಡ ತನ ತಡೆಗಟ್ಟುವಿಕೆ, ಸಂಚಾರಿ ಶ್ರವಣ ತಪಾಸಣಾ ಘಟಕ ಸ್ಥಾಪನೆ, ದೃಷ್ಟಿಯ ಬಲವರ್ಧನ ಘಟಕ ಸೇರಿದಂತೆ ಅನೇಕ ಹೊಸ ಹೊಸ ಘಟಕಗಳನ್ನು ಸಿದ್ಧಪಡಿಸಿದೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಫ್ಎಂ ಹಿಯರಿಂಗ್ ಏಡ್,
ಎಸ್- ಇಂಡಿಕೇಟರ್, ಎನ್- ಇಂಡಿಕೇಟರ್, ವಾಯ್ಸ್ ಲೈಟ್ ವಿತ್ ಫೊನೇಷನ್ ಡ್ಯುರೇಷನ್, ಹಿಯರಿಂಗ್ ಏಡ್ ಕೊರ್ಡ್ ಆಂಡ್ ಬ್ಯಾಟರಿ ಟೆಸ್ಟರ್, ಎಐಐಎಸ್ಎಚ್ ಕಮ್ಯೂನಿಕೇಟರ್ ಅನ್ನು ಅಭಿವೃದ್ಧಿಪಡಿಸಿದೆ.
ಭಾರತದ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದಾದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ಈಗ 49 ವರ್ಷ ತುಂಬಿ 50ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುವ ಕೆಲಸಕ್ಕೆ ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT