ಮೈಸೂರು: ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ರಾಜೀವ್ನಗರಕ್ಕೆ ಸೇರುವ ಮುಖ್ಯರಸ್ತೆಯ ಜಂಕ್ಷನ್ ಬಳಿ ನರ್ಮ್ ವತಿಯಿಂದ ಕೈಗೊಂಡಿರುವ ಒಳಚರಂಡಿ ಕಾಮಗಾರಿಯನ್ನು ಶಾಸಕ ತನ್ವೀರ್ ಸೇಠ್ ಪರಿಶೀಲಿಸಿದರು. ಈ ರಸ್ತೆಯು ರಾಜೀವ್ನಗರ, ಉದಯಗಿರಿ, ಕಲ್ಯಾಣಗಿರಿ, ಕಾಮನಕೆರೆಹುಂಡಿ, ರಿಂಗ್ ರಸ್ತೆ ಮುಂತಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ದಿನನಿತ್ಯ ಇಲ್ಲಿ ಉದಯಗಿರಿ, ರಾಜೀವ್ನಗರ ನಿವಾಸಿಗಳು, ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇದಲ್ಲದೆ ರಾಜೀವ್ನಗರದ ನಿಮ್ರಾ ಮಸೀದಿ ಬಳಿ ಒಳಚರಂಡಿ ವ್ಯವಸ್ಥೆಗೆ ಶಾಸಕರು ಕ್ರಮ ಕೈಗೊಂಡಿದ್ದಾರೆ. ಮುಖಂಡರಾದ ಅಲ್ಲಾಭಕ್ಷ್, ಮಿರ್ಜಾ ಜಂಷೀದ್ ಬೇಗ್ ಅಶ್ರಫಿ, ಖದೀರ್ ಅಹಮ್ಮದ್, ಇಕ್ಬಾಲ್ ಸಾಹೇಬ್ ಇದ್ದರು.