ಸುರಪುರ: ನ್ಯಾಯವಾದಿ ಯಲ್ಲಪ್ಪ ಹುಲಿಕಲ್ ಅವರಿಗೆ ರಾಷ್ಟ್ರಪತಿ ಚಿನ್ನದ ಪದಕ ದೊರೆತಿರುವುದು ಅವರ ಕಾರ್ಯದಕ್ಷತೆಗೆ ಸಂದ ಗೌರವವಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ವಿ.ಸಿ. ಪಾಟೀಲ್ ಹೇಳಿದರು. ಇಲ್ಲಿನ ವಕೀಲರ ಸಂಘ ಶನಿವಾರ ಏರ್ಪಡಿಸಿದ್ದ ರಾಷ್ಟ್ರಪತಿ ಚಿನ್ನದ ಪದಕ ಪಡೆದ ನ್ಯಾಯವಾದಿ ಯಲ್ಲಪ್ಪ ಹುಲಿಕಲ್ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ಯಂಕಾರಡ್ಡಿ ಬೋನಾಳ, ಮಲ್ಲಿಕಾರ್ಜುನ ಹಿರೇಮಠ, ಶಿವಾನಂದ ಅವಂಟಿ ಮಾತನಾಡಿ, ವಕೀಲರಾಗಿ, ಗೃಹರಕ್ಷಕ ದಳದಲ್ಲಿ ಸಲ್ಲಿಸಿದ ಸೇವೆ ಅವರಲ್ಲಿನ ಸಾಮಾಜಿಕ ಕಳಕಳಿ ಮತ್ತು ಕರ್ತವ್ಯ ಪ್ರಜ್ಞೆ ಎತ್ತಿತೋರಿಸುತ್ತದೆ. ವಕೀಲರಲ್ಲಿಯೂ ಸಾಮಾಜಿಕ ತದಾತ್ಮತೆ ಇದೆ ಎನ್ನುವುದಕ್ಕೆ ಹುಲಿಕಲ್ ಸಾಕ್ಷಿಯಾಗಿದ್ದಾರೆ. ಸನ್ಮಾನ ಸ್ವೀಕರಿಸಿದ ಯಲ್ಲಪ್ಪ ಹುಲಿಕಲ್ ಮಾತನಾಡಿದರು. ಹಿರಿಯ ವಕೀಲರಾದ ಜಿ.ಎಸ್. ಪಾಟೀಲ, ಉದಯಸಿಂಗ, ಬಸವರಾಜ ಕಿಲ್ಲೇದಾರ, ದೇವಿಂದ್ರಪ್ಪ ಬೇವಿನಕಟ್ಟಿ, ಪಾಪು ಪಾಟೀಲ, ನಿಂಗಣ್ಣ ಚಿಂಚೋಡಿ, ಎಸ್. ಸಿದ್ರಾಮಪ್ಪ, ಜಿ. ತಮ್ಮಣ್ಣ, ಎಸ್.ಎಂ. ಕನಕರಡ್ಡಿ, ಅಪ್ಪಾಸಾಹೇಬ ಪಾಟೀಲ, ಕವಲಿ ಇದ್ದರು. ಗುರುಪಾದಪ್ಪ ಬನಾಳೆ ನಿರೂಪಿಸಿದರು.