ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ಷೀರ ಭಾಗ್ಯ ಯೋಜನೆಯಿಂದ ಸದೃಢ ಸಾಧ್ಯ

Srinivasa Murthy VN
Updated On : 2 Aug 2013, 12:01 pm

ಪಾವಗಡ: ಸರ್ಕಾರ ರೂಪಿಸಿದ ಕ್ಷೀರ ಭಾಗ್ಯ ಯೋಜನೆ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗುವುದಲ್ಲದೇ ಪರಿಪೂರ್ಣ ಆರೋಗ್ಯವಂತರಾಗಲು ಸಹಕಾರಿ ಎಂದು ಮಂಗಳವಾಡ ಕ್ಲಸ್ಟರ್ ಸಿಆರ್‌ಪಿ ಎಸ್.ಜಿ.ಗೋವಿಂದಪ್ಪ ಅಭಿಪ್ರಾಯ ಪಟ್ಟರು. ಅವರು ಗುರುವಾರ ತಾ.ಮಂಗಳವಾಡ ಸರ್ಕಾರಿ ಪ್ರಾಥಮಿಕಾ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷೀರ ಯೋಜನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸಿ ಮಾತನಾಡುತ್ತಿದ್ದರು.
ಕ್ಷೀರ ಯೋಜನೆ ಒಂದು ಉತ್ತಮ ಕಾರ್ಯಕ್ರಮ ಎಂದ ಅವರು ವಿದ್ಯಾರ್ಥಿಗಳಿಗೆ ನಿತ್ಯ ಹಾಲು ವಿತರಿಸುವುದರಿಂದ ವಿದ್ಯಾರ್ಥಿಗಳ ಗೈರು ಹಾಜರಿ ತಪ್ಪಿಸಬಹುದು. ಅಲ್ಲದೇ ಈ ಯೋಜನೆ ಮಾನಸಿಕ ಸದೃಢತೆ ಸೇರಿದಂತೆ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ಪಡೆಯಲಿಕ್ಕೆ ಸ್ಫೂರ್ತಿದಾಯಕ ಎಂದರು.
ಸರ್ಕಾರ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಕ್ಷೀರ ಯೋಜನೆ ಎಂಬ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಪರಿಪೂರ್ಣ ಆರೋಗ್ಯ ಭಾಗ್ಯ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಮಂಗಳವಾಡ ಗ್ರಾಪಂ ಅಧ್ಯಕ್ಷೆ ನರಸಮ್ಮ ಉದ್ಘಾಟಿಸಿ ವಿದ್ಯಾರ್ಥಿಗಳಿಗಾಗಿ ಸರ್ಕಾರ ರೂಪಿಸಿದ ಕ್ಷೀರ ಯೋಜನೆ ಬಗ್ಗೆ ಶ್ಲಾಘಿಸಿದರು. ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಮಂಗಳವಾಡ ಕ್ಲಸ್ಟರ್‌ನ ಬಿಆರ್‌ಪಿ ನಟರಾಜ್, ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹನುಮಂತರಾಯಪ್ಪ ಮುಂತಾದವರು ಮಾತನಾಡಿ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ನಂತರ ಕ್ಲಸ್ಟರ್ ವ್ಯಾಪ್ತಿಯ ಅರಸೀಕೆರೆ, ವಿ.ಎಚ್.ಪಾಳ್ಯ ಸರ್ಕಾರಿ ಪ್ರಾಥಮಿಕಾ  ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಹಾಲು ವಿತರಿಸಿದರು. ಅರಸೀಕೆರೆ ಶಾಲೆಯ ಮುಖ್ಯ ಶಿಕ್ಷಕ ಎಚ್.ನಾಗರಾಜಯ್ಯ, ಮಂಗಳವಾಡ ಶಾಲೆ ಮುಖ್ಯ ಶಿಕ್ಷಕಿ ಸುಧಾರಾಣಿ, ಸಹ ಶಿಕ್ಷಕ ನಾಗರ್ಜುನ ಮಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement