ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬೆಳೆನಾಶ, ಹೆಕ್ಟೇರ್‌ಗೆ 15-20 ಸಾವಿರ

Srinivasa Murthy VN
Updated On : 1 Aug 2013, 11:59 am

ಹಾಸನ: ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಆಲೂಗೆಡ್ಡೆ, ಹೊಗೆಸೊಪ್ಪು, ಜೋಳ ಸೇರಿದಂತೆ ಇತರೆ ಬೆಳೆಗಳು ರೋಗಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿದ್ದು, ರೈತರಿಗೆ ಕೂಡಲೇ ಹೆಕ್ಟೇರ್‌ಗೆ 15ರಿಂದ 20 ಸಾವಿರ ರು. ಪರಿಹಾರ ನೀಡುವಂತೆ ಕಾಂಗ್ರೆಸ್ ಮುಖಂಡ ಎಚ್.ಕೆ.ಜವರೇಗೌಡ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಾಣಿಜ್ಯ ಬೆಳೆಗಳು ನಿರಂತರ ರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ನಾಶವಾಗಿದ್ದು, ರೈತರ ಶ್ರಮ ವ್ಯರ್ಥವಾಗುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ರೈತರ ಕಷ್ಟವನ್ನು ಅರಿತು ಸರ್ಕಾರಕ್ಕೆ ವರದಿಯನ್ನು ನೀಡಬೇಕು. ಬೆಂಗಳೂರಿಗೆ ನಿಯೋಗ ತೆರಳಿ ಶಾಶ್ವತ ಪರಿಹಾರ ನೀಡುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸುವುದಾಗಿ ಹೇಳಿದರು.
ಆಲೂಗೆಡ್ಡೆಗೆ ಅಂಗಮಾರಿ, ಜೋಳಕ್ಕೆ ಬಿಳಿರೋಗ, ಹೊಗೆಸೊಪ್ಪಿಗೂ ರೋಗ ಆವರಿಸಿದೆ. ಹೊಳೆನರಸೀಪುರ, ಹಾಸನ, ಚನ್ನರಾಯಪಟ್ಟಣದಲ್ಲಿ ಬೆಳೆಗಳು ಸಂಪೂರ್ಣ ಹಾಳಾಗಿದೆ. ಆದ್ದರಿಂದ ಹೆಕ್ಟೇರ್‌ಗೆ 15ರಿಂದ 20 ಸಾವಿರ ರು.ಗಳ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಮುಖಂಡ ಹೆಮ್ಮಿಗೆ ಮೋಹನ್ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆಯಾಗಿದ್ದು, ಈ ಬಾರಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂ ಬಿತ್ತನೆಯಾಗಿದೆ. ಹಾಸನದಲ್ಲಿ 11,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಈ ಪೈಕಿ 2500 ಹೆಕ್ಟೇರ್ ಪ್ರದೇಶಕ್ಕೆ ಅಂಗಮಾರಿ ಆವರಿಸಿದೆ. ಹೊಳೆನರಸೀಪುರದಲ್ಲಿ 2864 ಹೆಕ್ಟೇರ್ ಪ್ರದೇಶದಲ್ಲಿ ಆಲೂ ಬಿತ್ತನೆಯಾಗಿದ್ದು, ಈ ಪೈಕಿ 850 ಹೆಕ್ಟೇರ್ ಪ್ರದೇಶಕ್ಕೆ ಅಂಗಮಾರಿ ಆವರಿಸಿದೆ.
ಬೇಲೂರಿನಲ್ಲಿ 920 ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್‌ಡೆ ಬಿತ್ತನೆಯಾಗಿದ್ದು, ಈ ಪೈಕಿ 80 ಹೆಕ್ಟೇರ್ ಪ್ರದೇಶದಲ್ಲಿ ಅಂಗಮಾರಿ ರೋಗ ಆವರಿಸಿ ಬೆಳೆ ಸಂಪೂರ್ಣವಾಗಿ ನಾಶವಾಗಿ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು. ಎಚ್.ಕೆ.ಮಹೇಶ್, ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement