ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಳೆಗೆ ಹೆತ್ತೂರು ಹೋಬಳಿ ಕಾಫಿ ಹಾಳು

Srinivasa Murthy VN
Updated On : 1 Aug 2013, 11:59 am

ಹೆತ್ತೂರು (ಸಕಲೇಶಪುರ ತಾ.): ಹೆತ್ತೂರು ಹೋಬಳಿಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಭಾರಿ ಗಾಳಿಯಿಂದಾಗಿ ಕಾಫಿ ಪಸಲು ಹಾಳಾಗಿದೆ.
ಕಾಫಿ ಗಿಡಗಳು ಕೊಂಬೆ ಹಾಗೂ ಎಲೆಗಳನ್ನು ಕಳಚಿಕೊಂಡು ಬೋಳಾಗುತ್ತಿವೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ.
ಬೆಳೆಗಾರರ ಸಂಕಷ್ಟ ಕಣ್ಣೆದರು ನಡೆಯುತ್ತಿದ್ದರೂ ಏನೂ ಆಗೆ ಇಲ್ಲ ಎಂಬ ವರ್ತನೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಚ್.ಕೆ ರಾಧಕೃಷ್ಣ ಹೇಳಿದ್ದಾರೆ.
ಹೆತ್ತೂರು ಗ್ರಾಮದಲ್ಲಿ ಈವರೆಗೆ 3550ಮಿ.ಮಿ(ಸುಮಾರು 130 ಇಂಚು ಮಳೆಯಾಗಿದ್ದು) ಹೊಂಗಡಹಳ್ಳ, ಕಾಗಿನೆರೆ, ಬಿಸಿಲೆ ಸುಮಾರು 5000 ಮಿ.ಮೀ ಮಳೆಯಾಗಿದೆ.
(200 ಇಂಚು) ಎಂದರೇ ಅದರ ಭಯಾನಕ ಕತೆಯನ್ನು ಸರ್ಕಾರ ಅರಿಯಬೇಕು. ಇದರಿಂದ ಏಲಕ್ಕಿ ಹಾಗೂ ಕಾಳು ಮೆಣಸು, ಬತ್ತ ಬೆಳೆಗೂ ತೊಂದರೆಯಾಗಿದ್ದು, ಈ ಎಲ್ಲಾ ಬೆಳೆಗಾರರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮಕೈಗೊಂಡು ಮಲೆನಾಡು ಭಾಗವನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೆ ಹೆತ್ತೂರು ಹೋಬಳಿಯ ಸುತ್ತ ಮುತ್ತಲಿನ ಗ್ರಾಮಗಳಾದ ಹಾಡ್ಲಹಳ್ಳಿ, ಹಿರಿಯೂರು, ಬನ್ನಹಳ್ಳಿ, ಅತ್ತಿಹಳ್ಳಿಗಳಲ್ಲಿ ಆನೆಗಳು ಬೀರುಬಿಟ್ಟಿದ್ದು ದಿನನಿತ್ಯ ಅನೇಕ ರೈತರ ಹೋಲಗದ್ದೆಗಳಿಗೆ ನುಗ್ಗಿ ನಾಟಿ ಮಾಡಲು ಬೆಳೆಸಿದ್ದ ಸಸಿ ಮಡಿಗಳನ್ನು ತಿಂದು ದ್ವಂಸ ಮಾಡುತ್ತಿವೆ. ಅಲ್ಲದೆ ಬಾಳೆ ಮತ್ತು ಕಾಫಿಗಿಡಗಳನ್ನು ಕಿತ್ತು ಹಾಕುತ್ತಿದ್ದು, ಅರಣ್ಯ ಇಲಾಖೆ ಆನೆಗಳನ್ನು ಓಡಿಸಲು ಕ್ರಮ ಕೈಗೊಳ್ಳುತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement