ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜ್ಯ ಮಟ್ಟದ 23ನೇ ಮಾನಸಿಕ ವೈದ್ಯರ ಸಮ್ಮೇಳನ ನಾಳೆ

Srinivasa Murthy VN
Updated On : 1 Aug 2013, 11:59 am

ಹಾಸನ: ರಾಜ್ಯಮಟ್ಟದ 23ನೇ ಮಾನಸಿಕ ವೈದ್ಯರ ಸಮ್ಮೇಳನ ಜಿಲ್ಲಾ ಮಾನಸಿಕ ಆರೋಗ್ಯ ವೈದ್ಯರ ಸಂಘದ ವತಿಯಿಂದ ಆ.3ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ.ನಾಗೇಶ್ ತಿಳಿಸಿದರು.
ಸಮ್ಮೇಳನದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ವೈದ್ಯರ ಸಂಘದ ಅಧ್ಯಕ್ಷ ಡಾ.ಕೆ.ವಿ.ವಿಜಯ್‌ಕುಮಾರ್, ಸಂಘದ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಗಂಗಾಧರ್, ಜಿಲ್ಲಾ ಸತ್ರ ನ್ಯಾ. ಜೆ.ಎಸ್.ಸೋಮಶೇಖರ್, ಜಿಲ್ಲಾಧಿಕಾರಿ ಅನ್ಬುಕುಮಾರ್ ಹಾಗೂ ಐಎಂಎ ಅಧ್ಯಕ್ಷ ಡಾ.ವೈ.ಎಂ.ಸುಧಾಕರ್ ಪಾಲ್ಗೊಳ್ಳಲಿದ್ದಾರೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಮ್ಮೇಳದನಲ್ಲಿ ತಜ್ಞ ಮಾನಸಿಕ ವೈದ್ಯರು ಹಾಗೂ ಸಿಂಗ್ಮಂಡ್‌ನ ಪ್ರ್ಯಾಯ್‌ಡ್ ಹುಟ್ಟುರ್, ಆಸ್ಟ್ರಿಯಾದ ವಿಯೆನ್ನಾದಿಂದ ಸ್ಟೀಫನ್ ಡೊಮೆನಿಕ್ ಎಂಬ ಮಾನಸಿಕ ತಜ್ಞರು ಆಗಮಿಸುತ್ತಿದ್ದು, ಆತ್ಮಗಳ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ಮಂಡಿಸಲಿದ್ದಾರೆ. ಮಾನಸಿಕ ಆರೋಗ್ಯ ವೈದ್ಯರ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಕಿರಣ್‌ಕುಮಾರ್ ಮಾತನಾಡಿ, ರಾಜ್ಯ ಮಟ್ಟದ ಈ ಸಮಾವೇಶದಲ್ಲಿ ಖ್ಯಾತ ಮನೋವೈದ್ಯರು ಮಾಡುವ ಭಾಷಣಗಳ ಬಗ್ಗೆ ಚರ್ಚೆ, ವಿಶ್ಲೇಷಣೆ ನಡೆಯಲಿದೆ. ಸಮಾವೇಶದಲ್ಲಿ ನಾಡಿನ ಖ್ಯಾತ ತಜ್ಞ ವೈದ್ಯರು ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕೆ ಮುನ್ನ ಆ.2ರಂದು ಮಕ್ಕಳ ಮಾನಸಿಕ ಆರೋಗ್ಯ, ಲೈಂಗಿಕ ದೌರ್ಜನ್ಯ ಮತ್ತು ಮಾದಕ ವಸ್ತುಗಳ ಸೇವನೆ ವಿರುದ್ಧ, ರಕ್ಷಣೆ ಕುರಿತು ಅರಿವು ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಟ್ಯಾಂಕರ್
ಸಕಲೇಶಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ಹೆಗದ್ದೆ ಗ್ರಾಮ ಸಮೀಪ ಬುಲೆಟ್ ಟ್ಯಾಂಕರ್ ಉರುಳಿ ಬಿದ್ದಿರುವ ಘಟನೆ ಗುರುವಾರ ನಡೆದಿದೆ. ಮಂಗಳೂರಿನಿಂದ ಅನಿಲ ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ್ ತಿರುವು ರಸ್ತೆಯಲ್ಲಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಗೆ ಉರುಳಿಬಿದ್ದಿದೆ. ಟ್ಯಾಕರ್ ಚಾಲಕ ಹಾಗೂ ಆಟೋರೀಕ್ಷಾ ಚಾಲಕನಿಗೆ ಸಣ್ಣಪುಟ್ಟಗಾಯಗಳಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement