ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎರಡೂ ಕಿಡ್ನಿ ವೈಫಲ್ಯ, ಅರ್ಚಕನಿಗೆ ಸಹಕರಿಸಿ

Srinivasa Murthy VN
Updated On : 2 Aug 2013, 11:20 am

ತುರುವೇಕೆರೆ: ತಂದೆ ಕಾಲದಿಂದಲೂ ಬಳುವಳಿಯಾಗಿ ಬಂದ ಅರ್ಚಕ ವೃತ್ತಿಯೇ ಇವರಿಗೆ ಜೀವನೋಪಾಯ. ಶ್ರದ್ಧೆಯಿಂದಲೇ ದೇವರನ್ನು ಪೂಜಿಸುತ್ತಿದ್ದ 33 ವರ್ಷದ ಈ ಪೂಜಾರಿಗೆ ಎರಡು ವರ್ಷಗಳ ಹಿಂದೆ ಆರೋಗ್ಯ ಕೈ ಕೊಡಲು ಆರಂಭವಾಯಿತು. ವೈದ್ಯರೆ ಬಳಿ ಪರೀಕ್ಷೆಗೆ ಹೋದಾಗ ಎರಡೂ ಕಿಡ್ನಿಗಳು ಕೈ ಕೊಟ್ಟಿವೆ ಎಂದು ತಿಳಿದು ಬಂತು.
ಪತ್ನಿ, ಒಬ್ಬ ಮಗಳಿರುವ ತುರುವೇಕೆರೆ ಸಮೀಪದ ಸೂಳೆಕೆರೆಯ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಅರ್ಚಕ ವೃತ್ತಿ ಮಾಡುತ್ತಿರುವ ಎಸ್.ಎಚ್.ಯೋಗೀಶ್ಗೆ ನಂಬಿದ ದೇವರೀಗ ಕೈ ಬಿಟ್ಟಿದ್ದಾನೆ. ವಾರಕ್ಕೆರಡು ಬಾರಿ ಡಯಾಲಿಸಿಸ್ ನಡೆಸುವುದು ಇವರಿಗೆ ಅನಿವಾರ್ಯ. ಕೈಯಲ್ಲಿ ಹಣವೇ ಇಲ್ಲದೇ ಸಹಾಯಕ್ಕಾಗಿ ಯೋಗೀಶ್ ಪತ್ನಿ ಶುಭ ಮಂಗಳು ಅಂಗಲಾಚುತ್ತಿದ್ದಾರೆ.
ಕಿಡ್ನಿ ನೀಡಲು ಪತ್ನಿ ಸಿದ್ಧ: ಶುಭ ಮಂಗಳ ಯೋಗೀಶ್ಗೆ ಒಂದು ಕಿಡ್ನಿಯನ್ನು ದಾನ ಮಾಡಲು ಸಿದ್ಧರಿದ್ದಾರೆ. ಆದರೆ ಕಿಡ್ನಿ ಜೋಡಣೆ ಹಾಗೂ ನಂತರದ ವೈದ್ಯಕೀಯ ಔಷಧೋಪಚಾರಕ್ಕೆ ಲಕ್ಷಾಂತರ ರುಪಾಯಿ ಅಗತ್ಯವಿದೆ ಎಂದು ಬೆಂಗಳೂರಿನ ದೇವೇಗೌಡ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ ಜೀವನೋಪಾಯವನ್ನೇ ಮಾಡಲು ಅಸಾಧ್ಯವಾದ ಸ್ಥಿತಿಯಲ್ಲಿರುವ ಇವರಿಗೆ ಪುನಾ ಲಕ್ಷಾಂತರ ರುಪಾಯಿ ಹೊಂದಿಸೋದು ಆಗಿ ಹೋಗದ ಮಾತು.  ಹಾಗಾಗಿ ತಮ್ಮ ಕುಟುಂಬವನ್ನು ಕಾಪಾಡಿ ಎಂದು ಶುಭ ಮಂಗಳ ದಾನಿಗಳನ್ನು ಅಲವತ್ತುಕೊಂಡಿದ್ದಾರೆ.  
ಹಣ ಸಹಾಯ ಮಾಡಲಿಚ್ಛಿಸುವ ದಾನಿಗಳು ವಿಜಯ ಬ್ಯಾಂಕ್ ಖಾತೆ ಸಂಖ್ಯೆ 135601011001311ಗೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9945816283 ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement