ದೀಪು ಶಾಲೆಯಲ್ಲಿ ಕ್ಷೀರಭಾಗ್ಯಾರಂಭ
ಕ.ಪ್ರ.ವಾರ್ತೆ ತುರುವೇಕೆರೆ ಆ. 2
ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರಭಾಗ್ಯ ಯೋಜನೆಯನ್ನು ಪಟ್ಟಣದ ದೀಪು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾರಂಭ ಮಾಡಲಾಯಿತು.
ಬಿಇಓ ರಂಗಧಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳಿಗೆ ಪಟ್ಟಣ ಪಂಚಾಯ್ತಿ ಸದಸ್ಯ ಟಿ.ಪಿ.ಮಹೇಶ್ ಹಾಲು ವಿತರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕರಾದ ಕಮಲಮ್ಮ, ಸಹಾಯಕ ಅಕ್ಷರ ನಿದೇಶಕರಾದ ಎಸ್.ಶಿವಣ್ಣ, ಬಿ.ಆರ್.ಪಿ.ನಾಗರಾಜು, ಸಿ ಆರ್ ಪಿ ಗಳಾದ ಕೆ.ಎನ್.ಸುರೇಶ್, ಮತ್ತು ಶಂಕರಪ್ಪ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ರುದ್ರಯ್ಯ ಹಿರೇಮಠ್, ಶಾಲಾ ಮುಖ್ಯ ಶಿಕ್ಷಕ ಎಂ.ಸಿ.ನಟೇಶ್ ಮೊದಲಾದ ಶಿಕ್ಷಕರು ಭಾಗವಹಿಸಿದ್ದರು. ಎನ್ ಹೆಚ್ ಪಿ ಎಸ್ ಶಾಲೆ ಹಾಗೂ ಜೆಪಿ ಶಾಲೆಯಲ್ಲೂ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು. ಪ್ರತಿ ವಿದ್ಯಾರ್ಥಿಗೆ 18 ಗ್ರಾಂ ಹಾಲಿನ ಪುಡಿ ಹಾಗೂ 10 ಗ್ರಾಂ ಸಕ್ಕರೆಯನ್ನು ನೀಡಲಾಗುವುದು. ತರಗತಿಗಳು ಪ್ರಾರಂಭವಾಗುವ ಮುನ್ನ ಶಾಲಾ ವಿದ್ಯಾರ್ಥಿಗಳಿಗೆ ಹಾಲು ನೀಡಬೇಕು, ಪ್ರತಿ ವಾರಕ್ಕೆ ಮೂರು ದಿನ ಹಾಲು ನೀಡಬೇಕು ಎಂದು ಬಿ ಆರ್ಸಿ ಚಂದ್ರಯ್ಯ ತಿಳಿಸಿದ್ದಾರೆ.
281 ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ, 6 ಅನುದಾನಿತ ಪ್ರಾಥಮಿಕ ಶಾಲೆ ಮತ್ತು 17 ಪ್ರೌಢಶಾಲೆ ಹಾಗೂ 4 ಅನುದಾನಿತ ಪ್ರೌಢಶಾಲೆಗಳು ಕ್ಷೀರ ಯೋಜನೆಗೆ ಒಳಪಡಲಿದೆ. ಈಗಾಗಲೇ 25 ಕೆಜಿಯ 68 ಚೀಲ ಹಾಲಿನ ಪುಡಿ ಬಿಸಿಯೂಟ ವಿಭಾಗಕ್ಕೆ ಈಗಾಗಲೇ ಸರಬರಾಜಾಗಿದೆ. ಎಲ್ಲಾ ಶಾಲೆಗಳಿಗೂ ಅಲ್ಲಿಯ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾಗಿ ಹಾಲಿನ ಪುಡಿಯನ್ನು ಸರಬರಾಜು ಮಾಡಲಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಶಿವಣ್ಣ ತಿಳಿಸಿದ್ದಾರೆ. ಎನ್ ಹೆಚ್ ಪಿ ಎಸ್ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಮ್ಮ, ಜೆ ಪಿ ಶಾಲಾ ಆಡಳಿತ ಮಂಡಲಿಯ ಸದಸ್ಯರು ಹಾಜರಿದ್ದರು.