ಪ್ರೇರಕ, ಉಪ ಪ್ರೇರಕರ ಸಮಸ್ಯೆಗಳ ನಿವಾರಣೆಗೆ ಕ್ರಮ
ಪಾವಗಡ: ತಾಪಂ ಇಒ ಸಲಹೆ ಪಡೆದು ಮುಂಬರುವ ದಿನಗಳಲ್ಲಿ ಪ್ರೇರಕ ಮತ್ತು ಉಪ ಪ್ರೇರಕರ ಸಮಸ್ಯೆಗಳ ನಿವಾರಣೆಗೆ ಕಾರ್ಯೋನ್ಮುಖರಾಗುವುದಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡ ಸಾಕ್ಷರ್ ಭಾರತ್ ತಾ. ಸಂಯೋಜಕ ಚಂದ್ರಶೇಖರ್ ತಿಳಿಸಿದರು. ಈ ಹಿಂದೆ ತಾ. ಸಾಕ್ಷರ್ ಭಾರತ್ ಸಂಯೋಜಕರಾಗಿದ್ದ ಭಾಸ್ಕರ್ ಅವರಿಂದ ಶುಕ್ರವಾರ ಚಾರ್ಚ್ ಪಡೆದ ನಂತರ ಪ್ರೇರಕ ಮತ್ತು ಉಪ ಪ್ರೇರಕರ ಸಭೆಯಲ್ಲಿ ಮಾತಾನಾಡುತ್ತಿದ್ದರು. ಈ ಹಿಂದೆ ಭಾಸ್ಕರ್ ಅವರು ತಮ್ಮ 5ವರ್ಷ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಬಾಸ್ಕರ್ ಅವರು ಇಂದು ತಾ.ಸಂಯೋಜಕರ ಸೇವೆಯಿಂದ ಶಿಕ್ಷಕ ವೃತ್ತಿಗೆ ವರ್ಗಾವಣೆಯಾಗಿದ್ದಾರೆ ಎಂದರು. ಗ್ರಾಪಂನಲ್ಲಿ ಎಸಿಸಿ ಕೇಂದ್ರ ಸೇರಿದಂತೆ ಪ್ರೇರಕ ಮತ್ತು ಉಪ ಪ್ರೇರಕರು ಆನೇಕ ಸಮಸ್ಯೆಗಳು ಎದುರಿಸುತ್ತಿರುವುದು ಗಮನಕ್ಕೆ ಬಂದಿದ್ದು ಸಮಸ್ಯೆಗಳನ್ನು ಸಂಬಂಧಪಟ್ಟ ತಾಪಂ ಇಒ ಗಮನಕ್ಕೆ ತಂದು ಅವರ ಸಲಹೆ ಸೂಚನೆಗಳ ಮೇರೆಗೆ ಮುಂದಿನ ದಿನಗಳಲ್ಲಿ ಸಮಸ್ಯೆ ನಿವಾರಣೆಗೆ ಕಾರ್ಯನ್ಮುಖರಾಗಿ ಉತ್ತೇಜಿಸಲಾಗುವುದಾಗಿ ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಯಸ್ಕಾರ ಶಿಕ್ಷಣ ಸಂಯೋಜಕ ಚಂದ್ರಣ್ಣ ಮಾತಾನಾಡಿ ಗ್ರಾಪಂನಲ್ಲಿ ನಡೆಯುವ ಯೋಜನೆಯ ಎನ್ಐಒಎಸ್ ಪರೀಕ್ಷೆಯನ್ನು ನವ ಸಾಕ್ಷರರೇ ಬಂದು ಬರೆಯುವಂತೆ ಪ್ರೇರೇಪಿಸಬೇಕೆಂದು ಪ್ರೇರಕರಿಗೆ ಸಲಹೆ ನೀಡಿದರು. ಸಭೆಯಲ್ಲಿ ಸಾಕ್ಷರ್ ಭಾರತ್ ಎನ್ಜಿಒ ಕೋಡಿನೆಟರ್ ಶ್ರೀನಿವಾಸ್ ಸೇರಿದಂತೆ ತಾ,ಎಲ್ಲಾ ಗ್ರಾಪಂಗಳ ಪ್ರೇರಕ ಉಪ ಪ್ರೇರಕರಿದ್ದರು.
ಇಂದು ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮ
ಶಿರಾ: ಪಟ್ಟಣದ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಪ.ಪೂ. ಕಾಲೇಜಿನಲ್ಲಿ 2013-14ನೇ ಸಾಲಿನ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್. ಮತ್ತು ರೆಡ್ ರಿಬ್ಬನ್ ಕ್ಲಬ್ ಕಾರ್ಯಕ್ರಮಗಳ ಉದ್ಘಾಟನೆಯನ್ನು ಆ. 3 ಶನಿವಾರ ಬೆ.11 ಗಂಟೆಗೆ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಾಚಾರ್ಯ ಕೆ.ಎಂ.ಸೋಮಶೇಖರಪ್ಪ ತಿಳಿಸಿದ್ದಾರೆ. ಸಚಿವ ಟಿ.ಬಿ.ಜಯಚಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಆರ್.ನಾಗರಾಜು ವಹಿಸುವರು. ಕಾರ್ಯದರ್ಶಿ ಹೆಚ್.ಜಿ.ಲಿಂಗಯ್ಯ, ಖಜಾಂಚಿ ಜನಾರ್ಧನ್, ಸತೀಶ್. ಕೆ.ಮಲ್ಲಣ್ಣ ಮತ್ತಿತರರು ಹಾಜರಿರುವರು.
8 ರಂದು ಮಾಸಿಕ ಸಭೆ
ಶಿರಾ: ತಾಲೂಕು ನಿವೃತ್ತ ನೌಕರರ ಮಾಸಿಕ ಸಭೆಯನ್ನು ಆ. 8 ರ ಭಾನುವಾರ ಬೆ. 10 ಗಂಟೆಗೆ ತಾಲೂಕಿನ ಗಡಿ ಗ್ರಾಮ ಹಾರೋಗೆರೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದು ತಾಲೂಕಿನ ಎಲ್ಲಾ ನಿವೃತ್ತ ನೌಕರರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸಂಘದ ಉಪಾಧ್ಯಕ್ಷರಾದ ಮಲ್ಲಪ್ಪ ತಿಳಿದ್ದಾರೆ.
'ಅಕ್ಕಿ, ಸೀಮೆಎಣ್ಣೆ ಹಂಚಿಕೆಯಾಗಿಲ್ಲ'
ಶಿರಾ: ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ 1 ರು.ಗೆ. ಅಕ್ಕಿ ನೀಡುತ್ತಿದ್ದು, ಶಿರಾ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳು ಮತ್ತು ಸಹಕಾರ ಸಂಘಗಳಲ್ಲಿ ಪಡಿತರ ವ್ಯವಸ್ಥೆಯಲ್ಲಿ ಜುಲೈ 2013 ಮಾಹೆಯಲ್ಲಿ ಅಕ್ಕಿ ಮತ್ತು ಸೀಮೆ ಎಣ್ಣೆ ಸರಿಯಾದ ರೀತಿಯಲ್ಲಿ ಹಂಚಿಲ್ಲ ಎಂದು ದಲಿತ ಸಂಘರ್ಷ ಸಮತಿಯ ತಾಲೂಕು ಸಂಚಾಲಕ ಟೈರ್ ರಂಗನಾಥ್, ಖಜಾಂಚಿ ಕೆ.ರಾಜು ಆರೋಪಿಸಿದ್ದಾರೆ.
ಪಡಿತರ ಕಾರ್ಡುದಾರರಿಗೆ ಹಾಗೂ ಅನೇಕ ಪಡಿತರ ಕಾರ್ಡುಗಳನ್ನು ರದ್ದು ಮಾಡಿರುತ್ತಾರೆ. ಕೆಲವು ಪಡಿತರದಾರರುಗಳಿಗೆ ಪರಿಶೀಲನೆ ಹಂತದಲ್ಲಿದೆ ಆದ್ದರಿಂದ ನಿಮ್ಮ ಕಾರ್ಡುಗಳಿಗೆ ಅಲಾಟ್ಮೆಂಟ್ ಹಾಕಿರುವುದಿಲ್ಲವೆಂದು ಮೌಖಿಕವಾಗಿ ಆಹಾರ ನಿರೀಕ್ಷಕರು ಪಟ್ಟಣ ಪ್ರದೇಶದ ಪಡಿತರ ಕಾರ್ಡುದಾರರಿಗೆ, ವಿತರಕರಿಗೆ ತಿಳಿಸಿದ್ದಾರೆ. ಆದ್ದರಿಂದ ಪಡಿತರ ಕಾರ್ಡುಗಳನ್ನು ಸ್ಥಳಪರಿಶೀಲನೆ ಮಾಡಿ ನಂತರ ಕಾರ್ಡುಗಳನ್ನು ರದ್ದು ಮಾಡಬೇಕಿತ್ತು. ಆದರೆ ಕಚೇರಿಯಲ್ಲಿ ಕುಳಿತುಕೊಂಡು ಸುಮಾರು ಕಾರ್ಡುಗಳನ್ನು ರದ್ದು ಮಾಡಿರುತ್ತಾರೆ ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಇಂದು ಪ್ರತಿಭಾ ಪುರಸ್ಕಾರ
ತುಮಕೂರು: ಇಲ್ಲಿನ ಸಪ್ತಗಿರಿ ಪ.ಪೂ. ಕಾಲೇಜಿನಲ್ಲಿ ಇದೇ ತಿಂಗಳ 3 ರ ಶನಿವಾರ ಬೆಳಗ್ಗೆ 12 ಕ್ಕೆ ಕಾಲೇಜಿನ ಆವರಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಸಪ್ತಗಿರಿ ಪ.ಪೂ. ಕಾಲೇಜಿನ ಆಡಳಿತಾಧಿಕಾರಿ ಅರ್ಚನ ಎಸ್. ಕುಮಾರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಅನಂತ ಪದ್ಮನಾಭ್, ಚೆನ್ನಪ್ಪ ಬಾರಿಗಿಡದ್, ಕಾಲೇಜಿನ ಅಧ್ಯಕ್ಷ ಡಿ.ಎಸ್. ಕುಮಾರ್ ಆಗಮಿಸಲಿದ್ದಾರೆ.
ಇಂದು ಕದಳಿ ಪ್ರಶಸ್ತಿ ಪ್ರದಾನ
ಇಲ್ಲಿನ ಅಕ್ಕಮಹಾದೇವಿ ಸಮಾಜದಲ್ಲಿ ಇದೇ ತಿಂಗಳ 3 ರಂದು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ 5ನೇ ವಾರ್ಷಿಕೋತ್ಸವ ಮತ್ತು ಕದಳಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಗೊ.ರು. ಚನ್ನಬಸಪ್ಪ ವಹಿಸಲಿದ್ದಾರೆ.
ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ
ಇಲ್ಲಿನ ಹೊಯ್ಸಳ ಹೊಟೇಲ್ನಲ್ಲಿ ಇದೇ ತಿಂಗಳ 3 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಸಕ ಡಾ. ರಫೀಕ್ ಅಹಮದ್, ಮುಂತಾದವರು ಆಗಮಿಸಲಿದ್ದಾರೆ.
ಪ್ರತಿಭಾ ಪುರಸ್ಕಾರ
ಆ.3ರಂದು ಇಲ್ಲಿನ ಡಾ. ವಿಷ್ಣುಸೇನಾ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಮುದ್ದಹನುಮೇಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಆರ್. ಸ್ವಾಧೀನ್ಕುಮಾರ್, ಎಂ.ಪಿ. ಮಹೇಶ್ ಮುಂತಾದವರು ಆಗಮಿಸಲಿದ್ದಾರೆ.