ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಂಗಳವಾಡ ಗ್ರಾಮದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸ್ಥಾಪಿಸಿ

Srinivasa Murthy VN
Updated On : 3 Aug 2013, 12:22 pm

ಪಾವಗಡ: ಬಡವ, ರೈತಾಪಿ ಸೇರಿದಂತೆ ಸ್ವಸಹಾಯ ಸಂಘಗಳ ಮಹಿಳೆಯರು ಅನುಭವಿಸುವ ಸಮಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ಹೋಬಳಿ ಕೇಂದ್ರ ಸ್ಥಾನ ಮಂಗಳವಾಡ ಗ್ರಾಮದಲ್ಲಿ ಯಾವುದಾದರೊಂದು ರಾಷ್ಟ್ರೀಕೃತ ಬ್ಯಾಂಕ್ ತೆರೆದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಎಂದು ತಾ. ಜೆಡಿಎಸ್ ಮುಖಂಡ ಹಾಗೂ ತಾಪಂ ಮಾಜಿ ಅಧ್ಯಕ್ಷ ರಂಗಣ್ಣ ಒತ್ತಾಯಿಸಿದ್ದಾರೆ.
ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನ ಮಂಗಳವಾಡ ಗ್ರಾಮ ನಿಡಗಲ್ ಹೋಬಳಿಯ ಕೇಂದ್ರ ಸ್ಥಾನವಾಗಿದ್ದು ಸದಾ ಬಿಜಿಯಿಂದ ಕೂಡಿರುತ್ತದೆ. ಅಲ್ಲದೇ ಸುತ್ತಮುತ್ತಲಿನ ಸುಮಾರು 15ಗ್ರಾಮಗಳ ವ್ಯಾಪಾರ ವಹಿವಾಟು ಕೇಂದ್ರವಾಗಿದೆ. ದುರಂತವೆಂದರೆ ಇದುವರೆವಿಗೂ ಇಲ್ಲಿ ಯಾವುದಾದರೊಂದು ರಾಷ್ಟ್ರೀಕ್ರತ ಬ್ಯಾಂಕ್ ತೆರೆದಿಲ್ಲದ ಕಾರಣ ಸುತ್ತಮುತ್ತಲಿನ ಗ್ರಾಮಗಳ ರೈತರು, ಸ್ವಸಹಾಯಕ ಸಂಘಗಳ ನೂರಾರು ಮಹಿಳೆಯರು ನಾನಾ ರೀತಿಯ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಿಡಗಲ್ ಹೋಬಳಿ ಕೇಂದ್ರವಾದ ಮಂಗಳವಾಡ ಗ್ರಾಮದಲ್ಲಿಯೇ ಸುಮಾರು 8 ಸಾವಿರ ಜನ ಸಂಖ್ಯೆಯಿದ್ದು ಇಲ್ಲಿ ಸಹಕಾರ ಸಂಘಗಳು ಸೇರಿದಂತೆ ಗ್ರಾಮ ಪಂಚಾಯಿತಿ, ಪ್ರೌಢಶಾಲೆ, ಖಾಸಗಿ ಮತ್ತು ಸರ್ಕಾರಿ ಪಿಯು ಕಾಲೇಜ್ಗಳು, ಎಣ್ಣೆ ಬೀಜ ಸಹಕಾರಿ ಸಂಘ, ಕಂದಾಯ ಇಲಾಖೆ ಹಾಗೂ ಮುಂತಾದ ಸರ್ಕಾರಿ ಕಚೇರಿಗಳಿದ್ದು ವಾರಕ್ಕೂಮ್ಮೆ ದಿನವಾಹಿ ಹಾಗೂ ತರಕಾರಿ ಸಂತೆ ನಡೆಯುವುದರಿಂದ ಸದಾ ಬಿಜಿಯಿಂದ ಕೂಡಿರುತ್ತದೆ.
ಬಹುತೇಕ ಈ ಭಾಗದ ರೈತರು ನೀರಾವರಿ ಹಾಗೂ ಖುಷ್ಕಿ ಜಮೀನುಗಳು ಹೊಂದಿದ್ದು ಬೆಳೆ ಆಧಾರದಲ್ಲಿ ಜೀವನ ನಡೆಸುತ್ತಿದ್ದಾರೆ.
ಬ್ಯಾಂಕ್ಗಳಲ್ಲಿ ವ್ಯವಹಾರ ಮಾಡಬೇಕಾದರೆ ಇಲ್ಲಿಂದ 35ಕಿಮೀ ಪಾವಗಡಕ್ಕೆ ತೆರಳಬೇಕು. ಅಲ್ಲದೇ ಬ್ಯಾಂಕ್ಗಳು ಇಲ್ಲದ ಕಾರಣ ಬೆಳೆ ವಿಮೆ, ಬೆಳೆ ಸಾಲ ಸೇರಿದಂತೆ ಸರ್ಕಾರಿ ಸಹಾಯ ಧನದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದರು.
ಬ್ಯಾಂಕ್ ಅಭಿವೃದ್ಧಿ ಸೇರಿದಂತೆ ರೈತಾಪಿ ಬಡವ ಹಾಗೂ ವ್ಯಾಪಾರಸ್ಥರ ವ್ಯವಹಾರಕ್ಕಾಗಿ ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿ ಕೂಡಲೇ ಮಂಗಳವಾಡ ಗ್ರಾಮದಲ್ಲಿ ಬ್ಯಾಂಕ್ ತರೆದು ಅನುಕೂಲ ಕಲ್ಪಿಸುವಂತೆ ಸಾರ್ವಜನಿಕರ ಪರವಾಗಿ ಮಂಗಳವಾಡ ರಂಗಣ್ಣ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement