ಚುನಾವಣೆ ಸಂಬಂಧ ಅಬಕಾರಿ ನಿಯಂತ್ರಣ ಕೊಠಡಿ ಸ್ಥಾಪನೆ
ತುಮಕೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಸಂಬಂಧ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಸದರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಪ್ರಯುಕ್ತ ಅಬಕಾರಿ ಇಲಾಖೆಯಿಂದ ಈ ಕೆಳಕಂಡ ಕಚೇರಿಗಳಲ್ಲಿ ಅಬಕಾರಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಯಾವುದೇ ಅಕ್ರಮ ಮದ್ಯ, ಸೇಂದಿ, ಕಳ್ಳಬಟ್ಟಿ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟದಂತಹ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೆಳಕಂಡ ನಿಯಂತ್ರಣ ಕೊಠಡಿಗಳಿಗೆ ಮಾಹಿತಿಯನ್ನು ನೀಡಬಹುದು. ಅಬಕಾರಿ ನಿರೀಕ್ಷಕರ ಕ:ಕೇರಿ, ಕುಣಿಗಲ್ ವಲಯ, ಕುಣಿಗಲ್, ದೂ.ವಾ.ಸಂ. 08132-222544, ಅಬಕಾರಿ ಉಪಅಧೀಕ್ಷಕರ ಕಚೇರಿ, ತುಮಕೂರು ಉಪವಿಭಾಗ, ತುಮಕೂರು ದೂ.ವಾ.0816-2251307, ಅಬಕಾರಿ ಉಪ ಆಯುಕ್ತರ ಕಚೇರಿ, ತುಮಕೂರು ಜಿಲ್ಲೆ, ತುಮಕೂರು ದೂ.ವಾ.0816-2272927 ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 3, ಬೆಳಿಗ್ಗೆ 7 ಗಂಟೆಯಿಂದ ಆಗಸ್ಟ್ 4 ರ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವ ಕ್ಷೇತ್ರದ 5ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಆಗಸ್ಟ್ 7 ರಂದು ಮತಗಳ ಎಣಿಕೆ ನಡೆಯುವ ತಾಲೂಕು ಕೇಂದ್ರದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜಾರಿಯಲ್ಲಿರುವಂತೆ ಎಲ್ಲಾ ಮದ್ಯವಹಿವಾಟುಗಳನ್ನು ನಿಷೇಧಿಸಿ ಡಿಸಿ ಆದೇಶಿಸಿದ್ದಾರೆ. ತುಮಕೂರು ತಾಲೂಕಿನ ನಿಡುವಳಲು ಗ್ರಾ.ಪಂ.ನ ನಾರಾಯಣಕೆರೆ, ಸೀತಕಲ್ಲು ಗ್ರಾ.ಪಂ.ನ ಹಿರೇದೊಡ್‌ಡವಾಡಿ, ಹರಳೂರು ಗ್ರಾ.ಪಂ. ಕೌತಮಾರನಹಳ್ಳಿ, ಗೂಳೂರು ಗ್ರಾ.ಪಂ. ಗೂಳೂರು-2 ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ತಿಪಟೂರು ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾ.ಪಂ.ನ ಗುಡಿಗೊಂಡನಹಳ್ಳಿ, ಚಿ.ನಾ.ಹಳ್ಳಿ ತಾಲೂಕಿನ ದಸೂಡಿ ಗ್ರಾ.ಪಂ.ನ ದಸೂಡಿ, ತುರುವೇಕೆರೆ ತಾಲೂಕಿನ ಹುಲ್ಲೇಕೆರೆ ಗ್ರಾಪಂ.ನ ಕೆ.ಕೊಪ್ಪ, ಶಿರಾ ತಾಲೂಕಿನ ದೊಡ್ಡಅಗ್ರಹಾರ ಗ್ರಾ.ಪಂ.ನ, ಪಾವಗಡ ತಾಲೂಕಿನ ತಿರುಮಣಿ ಗ್ರಾ.ಪಂ. ನ ತಿರುಮಣಿ, ಸಾಸಲುಕುಂಟೆ ಗ್ರಾ.ಪಂ.ನ ಕೆಂಚಮ್ಮನಹಳ್ಳಿ, ಸಿದ್ದಾಪುರ ಗ್ರಾ.ಪಂ.ನ ಸಿದ್ದಾಪುರ, ಚೆನ್ನಕೇಶವ ಗ್ರಾ.ಪಂ.ನ ಚೆನ್ನಕೇಶವಪುರ ಗ್ರಾಪಂಗೆ ಉಪಚುನಾವಣೆ ನಡೆಯಲಿದೆ.