ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಕ್ಕಳು ತಪ್ಪು ಹೆಜ್ಜೆ ಇಡದಿರಲಿ

Srinivasa Murthy VN
Updated On : 4 Aug 2013, 12:38 pm

ಮಧುಗಿರಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣದಿಂದ  ಮಕ್ಕಳು ತಪ್ಪು ಹೆಜ್ಜೆ ಇಡದಂತೆ ಶಿಕ್ಷಕರು ಕಾಳಜಿ ವಹಿಸಬೇಕು ಎಂದು ಕೊಡಿಗೇನಹಳ್ಳಿ ಜಿ.ಪಂ.ಸದಸ್ಯೆ ಶಾಂತಲ ರಾಜಣ್ಣ ಕರೆ ನೀಡಿದರು.
ತಾಲೂಕು  ಪ್ರೌಢಶಾಲಾ ಮುಖ್ಯೋಪಾಧ್ಯಯರು ಸಂಘ, ಪ್ರೌಢ ಶಾಲಾ  ಸಹ ಶಿಕ್ಷಕರ ಸಂಘ ಹಾಗೂ ಖಾಸಗಿ ಅನುದಾನತ ರಹಿತ ಶಾಲೆಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ  ಶನಿವಾರ ಪಟ್ಟಣದ  ಮಾಲಿಮರಿಯಪ್ಪ ರಂಗಮಂದಿರದಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳ ಕಲಿಕೆ ನಿರಂತರವಾಗಿರಬೇಕು.ಅದರಲ್ಲಿಯೂ ಕಂಪ್ಯೂಟರ್ ಶಿಕ್ಷಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕಲಿಕೆಗೆ ಪೂರಕವಾಗಿರಬೇಕು. ಇದರಿಂದ ಮಕ್ಕಳು ತಪ್ಪು ಹೆಜ್ಜೆ ಇಡದಂತೆ ಪೋಷಕರಿಗಿಂತ ಶಿಕ್ಷಕರು ಹೆಚ್ಚು ಕಾಳಜಿ ವಹಿಸಬೇಕು.ಯಾವುದೇ ಕಾರಣಕ್ಕೂ ಶಿಕ್ಷಕರು ಜವಾಬ್ದಾರಿಯಿಂದ ನುಣಿಚಿಕೊಳ್ಳಬಾರದು ಎಂದು ಎಚ್ಚರಿಸಿ ಪ್ರತಿಭಾ ಪುರಸ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿದೀಪ ಎಂದರು.  
ಮಿಡಿಗೇಶಿ ಜಿ.ಪಂ.ಸದಸ್ಯ ಎಚ್. ಕೆಂಚಮಾರಯ್ಯ ಶಿಕ್ಷಕರು ಈ ದೇಶದ ದೊಡ್ಡ ಆಸ್ತಿ. ಆದ ಕಾರಣ  ಸೇವಾ ಮನೋಭಾವದಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ಪಡೆಯುವ ಅಂಕಗಳ ಮೇಲೆ ಪ್ರತಿಭೆ ಗುರುತಿಸದೇ ಮಕ್ಕಳಲ್ಲಿ ದೇಶ ಪ್ರೇಮ, ಶಿಸ್ತು, ಸಂಯಮ  ಬಿತ್ತಬೇಕು. ಶಿಕ್ಷಕರು ಸಂಘಟನೆ ಮೂಲಕ ತಮ್ಮ ಸೌಲಭ್ಯಗಳಿಗೆ ಹೋರಾಟ ಮಾಡದೇ ಶೈಕ್ಷಣಿಕ ಪ್ರಗತಿಗೆ ಸದಾ ಶ್ರಮಿಸಬೇಕು.ಆ ನಿಟ್ಟಿನಲ್ಲಿ ತಾವೂ ಕೂಡ ನಡೆ,ನುಡಿ, ವಿನಯತೆ ಇಂತಹ ಸದ್ಗುಣಗಳನ್ನು ಶಿಕ್ಷಕ ಮೈಗೂಡಿಸಿಕೊಳ್ಳಬೇಕು ಎಂದರು.
ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಟಿ.ಎಸ್.ಆಂಜನಪ್ಪ, ಜಿ.ಪಂ.ಸದಸ್ಯೆ ಮಂಜುಳಾ ವೀರೇಂದ್ರ ಪ್ರಸಾದ್ ಮಾತನಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ವೆಂಕಟರಾಮು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್.ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ,ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ಭಾಸ್ಕರ ರೆಡ್ಡಿ, ಜಗದೀಶ್, ಮುಖ್ಯ ಶಿಕ್ಷಕ ಟಿ.ಎಂ, ರುದ್ರಪ್ಪ, ಶಿವಕುಮಾರ್, ಕೆ.ಎನ್.ಹನುಮಂತರಾಯಪ್ಪ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement