ಇಂದು ಸಿದ್ಧಗಂಗಾ ಕಾಲೇಜು ವಾರ್ಷಿಕ ಚಟುವಟಿಕೆಗೆ ಚಾಲನೆ
ತುಮಕೂರು: ನಗರದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ 2013-14 ನೇ ಸಾಲಿನ ವಾರ್ಷಿಕ ಚಟುವಟಿಕೆ ಉದ್ಘಾಟನಾ ಸಮಾರಂಭವನ್ನು ಆ.23 ರಂದು ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಸಾಂಸ್ಕೃತಿಕ, ಕ್ರೀಡೆ, ಎನ್ಸಿಸಿ, ಎನ್ಎಸ್ಎಸ್, ಪೋಷಕರ ಸಭೆ ಮತ್ತು ಪ್ರಥಮ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಲಿದೆ. ತುಮಕೂರು ವಿಶ್ವವಿದ್ಯಾನಿಲಯ ಉಪ ಕುಲಪತಿ ಪ್ರೊ. ರಾಜಾಸಾಬ್.ಎ.ಎಚ್. ಸಮಾರಂಭ ಉದ್ಘಾಟಿಸಲಿದ್ದು, ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಾಂಶುಪಾಲ ಪ್ರೊ. ಬಿ.ಎಲ್. ವೈದ್ಯೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಚಟ್ನಹಳ್ಳಿ ಮಹೇಶ್ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಸಾಂಸ್ಕೃತಿಕ ಸಂಚಾಲಕ ಪ್ರೊ. ಆರ್.ಎಸ್. ಸುರೇಶ್ ತಿಳಿಸಿದ್ದಾರೆ.
ಶಾಸಕರ ಹುಟ್ಟುಹಬ್ಬ: ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ
ತಿಪಟೂರು: ಕೊರಟಗೆರೆ ಶಾಸಕ, ಲಂಬಾಣಿ ಸಂಘದ ಮುಖಂ ಡರೂ ಆದ ಸುಧಾಕರ್ಲಾಲ್ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಹೊನ್ನವಳ್ಳಿ ಹೋಬಳಿ ಹೆಚ್. ಭೈರಾಪುರದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ತಾಲೂಕು ಸೇವಲಾಲ್ ಲಂಬಾಣಿ ಸಂಘದ ತಾಲೂಕು ಅಧ್ಯಕ್ಷ ಬಿ.ಟಿ.ಕುಮಾರ್ ಮತ್ತಿತರರು ಸಿಹಿ ವಿತರಿಸಿದರು. ಸಂಘದ ತಾಲೂಕು ಸಂಚಾಲಕ ಆರ್.ಕಿರಣ್, ಶಾಲಾ ಶಿಕ್ಷಕರಾದ ಪ್ರಣಿತಾಕುಮಾರ್, ಸೀಮಾ, ಸಂಘಟನೆ ಪದಾಧಿಕಾರಿಗಳಾದ ರಾಮನಾಯ್ಕ, ಚಂದ್ರನಾಯ್ಕ ಮತ್ತಿತರರು ಇದ್ದರು.