ದೊಡ್ಡೆಕೆರೆಗೆ ಕರವೇ ಪೂಜೆ
ಶಿರಾ: ಇಲ್ಲಿನ ದೊಡ್ಡಕೆರೆಗೆ ಹೇಮಾವತಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಿರಾ ಕರ್ನಾಟಕ ರಕ್ಷಣಾ ವೇದಿಕೆ ತಂಡ ದೊಡ್ಡೆ ಕೆರೆಗೆ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ವೇದಿಕೆ ಅಧ್ಯಕ್ಷ ಆರ್.ನಾಗರಾಜ್, ವಿ.ಆದರ್ಶ, ಹರ್ಷವರ್ದನ್, ಬಾಬು, ಜೀವನ್, ಆನಂದ ಸಾಕ್ಷಿ, ಕಿಶೋರ್, ದೇವರಾಜು, ಜುಂಜೇಗೌಡ, ಮುರಾದ್, ಗುರು ಮತ್ತಿತರರು ಹಾಜರಿದ್ದರು.
25ಕ್ಕೆ ರಕ್ತದಾನ,ಆರೋಗ್ಯ ಶಿಬಿರ
ಶಿರಾ: ಶಿರಾ ತಾಲೂಕು ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ವತಿಯಿಂದ ಪಟ್ಟಣದ ಶ್ರೀರಂಗನಾಥ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆ.25ರಂದು ಉಚಿತ ಹೃದಯ ತಪಾಸಣಾ ಮತ್ತು ರಕ್ತದಾನ ಶಿಬಿರ ಏರ್ಪಡಿಸಿದ್ದು ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವ ಸಂಘದ ಅಧ್ಯಕ್ಷ ಜೆ.ಸಿದ್ದೇಶ್ವರ್ ಪ್ರಕಟಣೆಯಲ್ಲಿ ತಿಸಿದ್ದಾರೆ.
ಅನಧಿಕೃತ ಕಟ್ಟಡ ತೆರವು; ಭರವಸೆ
ಶಿರಾ: ತಾಲೂಕಿನ ಚೆನ್ನನಕುಂಟೆ ಗ್ರಾಮ ಠಾಣಾ ವ್ಯಾಪ್ತಿಯ ಸರ್ಕಾರಿ ಜಾಗದ 100100 ಅಡಿಗಳ ವಿಸ್ತೀರ್ಣದಲ್ಲಿರುವ ಅನಧಿಕೃತ ಕಟ್ಟಡವನ್ನು ಶಾಲೆ ನಿರ್ಮಿಸಲು ತೆರವುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಶಿರಾ ಘಟಕ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಕುಲಕರ್ಣಿ ಅವರು ತಮ್ಮ ಸಂಬಧಪಟ್ಟ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲನೆ ನೆಡೆಸಿ ಶಾಲೆಗಾಗಿ ಸದರಿ ಕಟ್ಟಡವನ್ನು ತೆರವುಗೊಳಿಸುವುದಾಗಿ ಕರವೆ ಕಾರ್ಯಕರ್ತರಿಗೆ ಮತ್ತು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಜಿಲ್ಲೆಗೆ ಒಂಬುಡ್ಸ್‌ಮನ್ ನೇಮಕ
ತುಮಕೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತುಮಕೂರು ಜಿಲ್ಲೆಗೆ ರಾಮಚಂದ್ರ ಇವರನ್ನು ಒಂಬುಡ್ಸ್‌ಮನ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಪಂ ಸಿಇಒ ಗೋವಿಂದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಕಾರ್ಯಾಗಾರ
ತುಮಕೂರು: ನಗರದ ಎಸ್‌ಐಟಿ. ಬಡಾವಣೆಯ 28ನೇ ಕ್ರಾಸ್‌ನಲ್ಲಿರುವ 'ನಗೆಮುಗುಳು' ಹೆಚ್.ಎಸ್.ಆರ್. ನಿವಾಸದಲ್ಲಿ ಆ.24 ರಂದು ಶನಿವಾರ ಬೆಳಗ್ಗೆ 11-30 ಗಂಟೆಯಿಂದ ಮಹಿಳೆಯರಿಗಾಗಿ ಅಡಿಗೆಮನೆಯಲ್ಲಿ ಔಷಧ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ನಿವೃತ್ತ ವಿಜ್ಞಾನಿ ಎ. ಶಿವಕುಮಾರ್ ಕಾರ್ಯಾಗಾರ ನಡೆಸಿಕೊಡುವರು. ಆಸಕ್ತ ಮಹಿಳೆಯರು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆಯಬೇಕೆಂದು ಕಾರ್ಯಕ್ರಮದ ಆಯೋಜಕಿ ಹೆಚ್.ಎಸ್.ಸಾವಿತ್ರಿ ರಾಮಣ್ಣ ಕೋರಿದ್ದಾರೆ.