ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮತದಾನದಲ್ಲಿ ಮಹಿಳೆಯರೇ ಮೇಲುಗೈ

Srinivasa Murthy VN
Updated On : 22 Aug 2013, 11:46 am

ಕುಣಿಗಲ್: ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಗೆ ಬುಧವಾರ ನಡೆದ ಚುನಾವಣೆಯಲ್ಲಿ 1,70,695 ಮತದಾರರ ಪೈಕಿ 1,13,331 ಮತದಾರರು ಹಕ್ಕನ್ನು ಚಲಾಯಿಸುವ ಮೂಲಕ ಶೇ. 66.39 ಮತದಾನವಾಗಿದೆ. 16 ಮಂಗಳಮುಖಿಯರು ಮತದಾನದ ಹಕ್ಕನ್ನು ಹೊಂದಿದ್ದು, ಯಾರೊಬ್ಬರು ತಮ್ಮ ಹಕ್ಕನ್ನು ಚಲಾವಣೆ ಮಾಡದಿರುವುದು ವಿಶೇಷವಾಗಿದೆ.
86,234 ಪುರುಷ ಮತದಾರರ ಪೈಕಿ 56,042 ಮತಚಲಾಯಿಸಿ, ಶೇಕಡವಾರು 64.99 ಆದರೆ, 84,445 ಮಹಿಳಾ ಮತದಾರರ ಪೈಕಿ 57,289 ಮತದಾರರ ಮತಚಲಾವಣೆ ಮಾಡಿದ್ದು, ಶೇಕಡವಾರು 67.84ರಷ್ಟು ಮತಚಲಾಯಿಸಿ ಪುರಷ ಮತದಾರರಿಗಿಂತಲೂ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಮತಗಟ್ಟೆ ಸಂ.83ರಲ್ಲಿನ ಕಲ್ಲನಾಯಕನಹಳ್ಳಿಯಲ್ಲಿ ಅತಿಹೆಚ್ಚು ಶೇ.85.42ರಷ್ಟು ಮತದಾನ ನಡೆದಿದ್ದರೆ, ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆ ಸಂಖ್ಯೆ78ರಲ್ಲಿ ಅತಿ ಕಡಿಮೆ ಶೇಕಡಾ 41.76 ರಷ್ಟು ಕಡಿಮೆ ಮತದಾನವಾಗಿದೆ.

ಶಿಕ್ಷಕರಿಗೆ ಸಾಂಸ್ಕಂತಿಕ ಸ್ಫರ್ಧೆ
ಗುಬ್ಬಿ:
ಸೆ.5 ರಂದು ಪಟ್ಟಣದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಕ್ರೀಡಾ ಹಾಗೂ ಸಾಂಸ್ಕಂತಿಕ ಸ್ಫರ್ಧೆಗಳನ್ನು  ಏರ್ಪಡಿಸಲಾಗಿದ್ದು, ಆಸಕ್ತ ಶಿಕ್ಷಕರು ಆ.24 ರಂದು ನಡೆಯಲಿರುವ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ  ಆ.24 ರಂದು ಬೆಳಗ್ಗೆ 11 ಗಂಟೆಗೆ ಕ್ರೀಢಾ ಸ್ಪರ್ದೆಗಳು ನಡೆಯಲಿದ್ದು, ಅದೇ ದಿನ ಬಿ.ಆರ್.ಸಿ ಕಚೇರಿಯಲ್ಲಿ ವಿವಿಧ ಸಾಂಸ್ಕತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಆಸಕ್ತ ಶಿಕ್ಷಕರು ಭಾಗವಹಿಸುವಂತೆ ಬಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಯೋಜಕ ಹುದ್ದೆಗೆ ಅರ್ಜಿ ಆಹ್ವಾನ
ಗುಬ್ಬಿ:
ಶಿಕ್ಷಣ ಸಂಯೋಜಕರ ಹುದ್ದೆಗೆ ಆಯ್ಕೆ ಮಾಡಲು ಸ್ಫರ್ಧಾತ್ಮಕ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ ಪ್ರಾಥಮಿಕ ಶಾಲೆಗಳ ಪದವೀದರ ಮುಖ್ಯ ಶಿಕ್ಷಕರು ಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆ.26  ಕಡೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಬೆಂಗಾವಲು ಕಣ್ತಪ್ಪಿಸಿದ್ದ ಆರೋಪಿಗೆ  ಸಜೆ
ತುಮಕೂರು:
ಬಹಿರ್ದೆಸೆಯ ನೆಪಹೊಡ್‌ಡಿ ಪೋಲೀಸರಿಂದ ತಪ್ಪಿಸಿಕೊಂಡಿದ್ದ ಪ್ರಕರಣವೊಂದರ ಆರೋಪಿಗೆ 2ನೇ ಅಧಿಕ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಫೈರೋಜ್ ಹೆಚ್. ಹುಕಾಲಿ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಆರೋಪಿ ಪ್ರೇಮಾ ಅಲಿಯಾಸ್ ಶಾಂತ ಎಂಬಾಕೆಯ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವು 1ನೇ ಹೆಚ್ಚುವರಿ ಸಿ.ಜೆ.ಎಂ. ನ್ಯಾಯಾಲಯದಲ್ಲಿ ವಿಚಾರಣೆಯಾಗಿದ್ದು, ಏ. 5, 2013 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲು ಗ್ರಾಮಾಂತರ ಠಾಣೆ ಪೊಲೀಸರು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಬೆಂಗಾವಲು ಮಾಡಿಕೊಂಡು ಕರೆದುಕೊಂಡು ಬಂದು ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸಂಜೆ 5.15 ಗಂಟೆಗೆ ವಾಪಸ್ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲು ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಆರೋಪಿ ಪ್ರೇಮ ಬಹಿರ್ದೆಸೆಗೆ ಹೋಗಲು ಶೌಚಾಲಯ ಒಳಗೆ ಕರೆದುಕೊಂಡು ಹೋದಾಗ ಜನಸಂದಣಿಯಲ್ಲಿ ಸಿಬ್ಬಂದಿಯ ಕಣ್ತಪ್ಪಿಸಿ ಅಲ್ಲಿಂದ ಓಡಿಹೋಗಿರುತ್ತಾಳೆ ಎಂದು ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನಗರ ಠಾಣಾ ಪೊಲೀಸ್ ಆರಕ್ಷಕ ಉಪನಿರೀಕ್ಷಕ ಎಸ್. ಮುನಿರಾಜು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಯ ವಿರುದ್ದ ಆರೋಪ ಸಾಬೀತಾದ ಕಾರಣ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಎ.ಆರ್. ಸತೀಶ್ ಗೌಡ, ಸಹಾಯಕ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement