ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವ್ಯಕ್ತಿ ಶರೀರ ಸದೃಢವಾಗಿದ್ದಲ್ಲಿ ಸಾಧಿಸುವ ಛಲಕ್ಕೆ ಬಲ: ವೀರೇಶಾನಂದ ಸ್ವಾಮೀಜಿ

Srinivasa Murthy VN
Updated On : 22 Aug 2013, 11:45 am

ಕುಣಿಗಲ್:  ಶರೀರ ಮತ್ತು ಮನಸು ಜೊತೆ ಜೊತೆಯಾಗಿ ಸಾಗುತ್ತವೆ ಶರೀರಕ್ಕೆ ಕಾಯಿಲೆ ಬಂದಲ್ಲಿ ಮನಸು ಸಹ ಕುಗ್ಗಿಹೋಗುತ್ತದೆ. ದುರ್ಬಲ ಶರೀರಕ್ಕೆ ಯಾವುದನ್ನು ಸಾಧಿಸಲು ಆಗುವುದಿಲ್ಲ. ಶರೀರ ಸದೃಢವಾಗಿದ್ದಲ್ಲಿ ಮಾತ್ರ ಎನ್ನನ್ನು ಬೇಕಾದರೂ ಸಾಧಿಸುವ ಛಲ ಬರುತ್ತದೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕಿವಿಮಾತು ತಿಳಿಸಿದರು.
ಗುರುವಾರ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ  ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ ಕ್ರೀಡಾಕೂಟ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
 ದೇಶ ಕಂಡ ಉತ್ತಮ ದಾರ್ಶನಿಕರು ಸಹ ಎಂದೂ ಶಾರೀರಕ ಆರೋಗ್ಯವನ್ನು ಕಡೆಗಣಿಸಲಿಲ್ಲ. ಉತ್ತಮ ಶಾರೀರಕ ಸದೃಢತೆಗೆ ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ. ಉತ್ತಮ ಶಾರೀರಕ ಆರೋಗ್ಯ ಹೊಂದಿದ್ದಾಗ ಉತ್ತಮ ಅಂಶಗಳನ್ನು ಗ್ರಹಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆ, ವಿದ್ಯೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೆ ಪ್ರಾಮುಖ್ಯತೆಯನ್ನು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹ ನೀಡಬೇಕಿದೆ ಎಂದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಉಮಾರಾಣಿ, ಕ್ರೀಡೆಯಲ್ಲಿ ಸೋಲು, ಗೆಲವು ಸಹಜ. ಆದರೆ ಭಾಗವಹಿಸಿದವರೆಲ್ಲಾ ಗೆಲ್ಲಲೇಬೇಕೆಂಬ ಛಲದಿಂದ ಪಾಲ್ಗೊಳ್ಳುತ್ತಾರೆ.
ಇಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವದಿಂದ ಸ್ಪರ್ಧೆಗಿಳುವುದೇ ಪ್ರಮುಖ ವಿದ್ಯಾರ್ಥಿ ದಿಸೆಯಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲ ವಿದ್ಯಾರ್ಥಿಗಳ ಮಾನಸಿಕ ಬೌದ್ದಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದರು ಅಕ್ಷರದಾಸೋಹ ಯೋಜನಾಧಿಕಾರಿ ಕೃಷ್ಣ ಧ್ವಜಾರೋಹಣೆ ನೆರವೇರಿಸಿದರೆ, ಬಿಇಒ ವಿ.ಜಿ. ಲೋಕೇಶ್ ಅಧ್ಯಕ್ಷತೆ ವಹಿಸಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್, ಬಿಆರ್ಸಿ ಗುಲ್ಜಾರ್ ಆಹಮದ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ಪ್ರಮುಖರಾದ ಮಮತಾಮಣಿ, ಗಂಗಯ್ಯ, ಮರಿಯಪ್ಪ ಇತರರು ಇದ್ದರು,ತಾಲೂಕಿನ ವಿವಿದೆಡೆಯಿಂದ ಒಟ್ಟಾರೆ 98 ದೈಹಿಕ ಶಿಕ್ಷಕರು ಸೇರಿದಂತೆ ವಿವಿಧ ಶಾಲೆಗಳಿಂದ ಸಾವಿರಕ್ಕೂ ಹೆಚ್ಚು ಕ್ರೀಡಾ ಪಟುಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement