ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆ ಬ್ಯಾಂಕ್ ಸೂಪರ್‌ಸೀಡ್: ಇನ್ನೂ ಬಾರದ ಕೋರ್ಟ್ ಆದೇಶ ಪತ್ರ

Srinivasa Murthy VN
Updated On : 25 Aug 2013, 12:07 pm

ತುರುವೇಕೆರೆ: ಸ್ಥಳೀಯ ಪಟ್ಟಣ ಸಹಕಾರಿ ಸಂಘವನ್ನು ಕಳೆದ 24 ದಿನಗಳ ಹಿಂದೆಯೇ ಸೂಪರ್ ಸೀಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಿಂದಿನ ಸಹಕಾರ ಸಚಿವ ಪುಟ್ಟಸ್ವಾಮಿ ಸಂಘದ ವಿರದ್ಧ ಬಂದಿರುವ ದೂರನ್ನು ಪರಿಶೀಲಿಸಿ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳ ಜಿಲ್ಲಾ ಅಧಿಕಾರಿ ಬಾಲಶೇಖರ್ ರವರ ಸೂಚನೆ ಮೇರೆಗೆ ಸಹಕಾರ ಸಂಘಗಳ ಅಧಿಕಾರಿಗಳು ತನಿಖೆ ನಡೆಸಿ ಆಡಳಿತ ಮಂಡಲಿ ಮಾಡಿದೆ ಎನ್ನಲಾದ ಹಲವಾರು ಹಗರಣಗಳು ಬಯಲಿಗೆ ಬಂದಿದ್ದು ಅವೆಲ್ಲವೂ ಸಂಸ್ಥೆಯನ್ನು ಸೂಪರ್ ಸೀಡ್ ಮಾಡಬಹುದು ಎಂದು ವರದಿ ನೀಡಿತ್ತು. ವರದಿಯನ್ವಯ ಜಿಲ್ಲಾ ಸಹಕಾರ ಸಂಘಗಳ ಅಧಿಕಾರಿ ಬಾಲಶೇಖರ್  ಸಂಘವನ್ನು ಕಳೆದ ಎಂಟತ್ತು ತಿಂಗಳ ಹಿಂದೆಯೇ ಸದರಿ ಸಹಕಾರಿ ಸಂಘವನ್ನು ಸೂಪರ್ ಸೀಡ್ ಮಾಡಿ ಆದೇಶ ನೀಡಿದ್ದರು.
ಆದರೆ, ಈ ಕ್ರಮ ಪ್ರಶ್ನಿಸಿದ ಆಡಳಿತ ಮಂಡಳಿ, ಸಹಕಾರ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ನಡೆದ ವಿಚಾರಣೆ ವೇಳೆ ಸಹಕಾರ ಸಂಘಗಳ ಜಿಲ್ಲಾ ಅಧಿಕಾರಿಗಳು ನೀಡಿರುವ ವರದಿ ಹಾಗೂ ಪ್ರಕಟಣೆ ಸಿಂಧು ಎಂದು ಹೇಳಿರುವ ನ್ಯಾಯಾಲಯ ಆಡಳಿತ ಮಂಡಳಿ ಮನವಿ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಪಟ್ಟಣ ಸಹಕಾರ ಸಂಘದ ಆಡಳಿತ ಮಂಡಲಿಯನ್ನು ವಜಾ ಮಾಡಿ ಆಡಳಿತಾಧಿಕಾರಿಗಳ ನೇಮಕ ಮಾಡುವುದು ಸರಿ ಎಂಬುದು ಸಹಕಾರಿ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯದ ಅಭಿಪ್ರಾಯವಾಗಿದೆ.
ನ್ಯಾಯಾಲಯದ ಆದೇಶ ಜಾರಿಯಾಗಿ 24 ದಿನಗಳು ಕಳೆದರೂ ಸಹ ಆಡಳಿತಾಧಿಕಾರಿಯನ್ನು ನೇಮಕ ಮಾಡದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲಾ ಕಚೇರಿಗೆ ಇನ್ನೂ ನ್ಯಾಯಾಲಯದ ಆದೇಶದ ಪ್ರತಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಸಿಬ್ಬಂದಿ ನ್ಯಾಯಾಲಯದ ಆದೇಶ ಪ್ರತಿಯನ್ನು ನ್ಯಾಯಾಲಯವೇ ತಮಗೆ ನೀಡಬೇಕು ಎಂದು ಹೇಳುತ್ತಾರೆ. ಇತ್ತ ಸಹಾಯಕ ನಿಬಂಧಕರ ಕ:ಕೇರಿಯ ಸಿಬ್ಬಂದಿಯೂ ಸಹ ತಮಗೆ ನ್ಯಾಯಲಯದ ಆದೇಶದ ಪ್ರತಿ ಬಂದಿಲ್ಲ ಎನ್ನುತ್ತಾರೆ. ಆದರೆ, ನ್ಯಾಯಾಲಯದಿಂದ ಹೊರಟ ಆದೇಶವನ್ನು ಜಾರಿ ಮಾಡುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement