ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪತ್ರಕರ್ತೆ ಮೇಲಿನ ಅತ್ಯಾಚಾರಕ್ಕೆ ಖಂಡನೆ

Srinivasa Murthy VN
Updated On : 25 Aug 2013, 12:07 pm

ತಿಪಟೂರು: ಮುಂಬೈ ಪತ್ರಕರ್ತೆಯ ಮೇಲೆ ದುಷ್ಕರ್ಮಿ ಯುವಕರ ಗುಂಪು ಅತ್ಯಾಚಾರವೆಸಗಿರುವುದು ಖಂಡನೀಯವಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಸಂಬಂಧ ಎಸ್‌ಎಫ್‌ಐ ಮುಖಂಡರು ಮಾತನಾಡಿ, ಇಂದು ಸಮಾಜದಲ್ಲಿ ಮಹಿಳೆಯರು ಅತ್ಯಾಚಾರ, ವರದಕ್ಷಿಣೆ ಕಿರುಕುಳ, ದೌರ್ಜನ್ಯಗಳಂತ ಪ್ರಕರಣಗಳು ಇತ್ತೀಚೆಗಂತೂ ದಿನನಿತ್ಯ ಸಂಭವಿಸುತ್ತಿದ್ದು, ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲದಂತಾಗಿ ಒಂಟಿಯಾಗಿ ಓಡಾಡದಂತಾಗಿದೆ. ಹೆಣ್ಣು ಮಕ್ಕಳನ್ನು ಮಾರಾಟದ ಸರಕನ್ನಾಗಿ ಉಪಯೋಗಿಸುತ್ತಿರುವುದು ತೀವ್ರ ಕಳವಳದ ಸಂಗತಿಯಾಗಿದೆ. ಮುಂಬೈ ಪತ್ರಕರ್ತೆ ಮೇಲೆ ಅತ್ಯಾಚಾರ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದು,ಅತ್ಯಾಚಾರ ವೆಸಗಿರುವ ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ಜೊತೆಗೆ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎ.ಎಲ್.ದಿವ್ಯಾ,ಕಾರ್ಯದರ್ಶಿ ಕೆ.ಎಸ್.ಮೇಘಶ್ರೀ,ಸಹ ಕಾರ್ಯದರ್ಶಿ ಎಸ್.ಲಾವಣ್ಯ,ತಾಲ್ಲೂಕು ಮುಖಂಡರುಗಳಾದ ಅಂಕುಶ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.

ಎನ್‌ಸಿಸಿ ಘಟಕಕ್ಕೆ ಚಾಲನೆ
ತಿಪಟೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಘಟಕ ಮತ್ತು ಕರ್ನಾಟಕ ಬ್ಯಾಟಾಲಿಯನ್ 4ನೇ ಘಟಕದ ಸಂಯುಕ್ತಾಶ್ರಯದಲ್ಲಿ ಎನ್‌ಸಿಸಿ ಆಯ್ಕೆ ಪ್ರಕ್ರಿಯೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಿಲಿಟರಿ ಅಧಿಕಾರಿ ಅರ್ಜುನ್ ಸುಬೇದಾರ್, ಹಿರೇಗೌಡ, ಪ್ರಾಂಶುಪಾಲ ಡಾ.ಜಯದೇವಪ್ಪ, ಗುರುಕುಲ ಮಠದ ಸಿಇಒ ಹರಿಪ್ರಸಾದ್,ಎನ್‌ಸಿಸಿ ಅಧಿಕಾರಿ ಪ್ರೊ.ರಾಜಶೇಖರ್ ಹಾಗೂ ಸಿಬ್ಬಂದಿವರ್ಗ ಸೇರಿದಂತೆ ಕಾಲೇಜಿನ 250 ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement