ವೊಡಾ ಫೋನ್ ಪೋಸ್ಟ್ ಪೇಯ್ಡ್ ಸೇವೆ ಆರಂಭ
ತುರುವೇಕೆರೆ: ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ವೊಡಾ ಫೋನ್ ಪೋಸ್ಟ್ ಪೇಯ್ಡ್ ಸೇವೆಯನ್ನು ಸಂಸ್ಥೆಯ ವಲಯ ವ್ಯವಸ್ಥಾಪಕ ಎಂ.ಸಿ.ಅನುಪ್ ಗ್ರಾಹಕರಿಗೆ ಕರೆನ್ಸಿ ನೀಡುವ ಮೂಲಕ ಸೇವೆಗೆ ಚಾಲನೆ ನೀಡಿದರು. ದುಬಾರಿ ದರದ ಕರೆಯ ನಡುವೆಯೂ ಗ್ರಾಹಕರ ಅನುಕೂಲಕ್ಕಾಗಿ ಹತ್ತು ಹಲವಾರು ವಿಶಿಷ್ಟ ಸೇವೆಯನ್ನು ನೀಡುತ್ತಿದೆ. ಸಾಮಾನ್ಯ ಜನರ ಉಪಯೋಗವನ್ನೂ ಗಮನದಲ್ಲಿಕೊಂಡು ಯೋಜನೆಗಳನ್ನು ಜಾರಿಗೊಳಿಸಿದ್ದು ಬಹಳ ಉಪಯೋಗಕರವಾಗಿದೆ ಎಂದರು.
ವಿಭಾಗೀಯ ವ್ಯವಸ್ಥಾಪಕ ಛಾಯಾಪತಿ, ಸುಧೀರ್ ಶ್ಯಾನುಭೋಗ್, ಸ್ಥಳೀಯ ದಾಸ್ತಾನುದಾರ ಲಕ್ಷ್ಮೀ ನರಸಿಂಹಪ್ರಸಾದ್(ರವಿ) ಮೊದಲಾದವರು ಹಾಜರಿದ್ದರು. ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಪೋಸ್ಟ್ ಪೇಯ್ಡ್ ಸೇವೆ ಲಭಿಸಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಲಕ್ಷ್ಮೀನರಸಿಂಹ ಪ್ರಸಾದ್ ವಿನಂತಿಸಿಕೊಂಡಿದ್ದಾರೆ.
ಇಸಿಒ ಹುದ್ದೆಗೆ ಅರ್ಜಿ ಆಹ್ವಾನ
ತುರುವೇಕೆರೆ: ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಖಾಲಿ ಇರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಂಯೋಜಕರ (ಇಸಿಒ) ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು 10 ವರ್ಷ ಸೇವೆ ಸಲ್ಲಿಸಿರುವ ಪ್ರೌಢಶಾಲಾ ಸಹ ಶಿಕ್ಷಕರು ಹಾಗೂ 50 ವರ್ಷದ ವಯೋವುತಿ ಒಳಗೆ ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮುಖ್ಯ ಶಿಕ್ಷಕರು ಆ. 26 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿಥಿ ಶಿಕ್ಷಕ ಹುದ್ದೆ; ಅರ್ಜಿ
ತುರುವೇಕೆರೆ: 2013 -1 4 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅವಶ್ಯಕವಿರುವ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಆ. 26 ರಿಂದ 31 ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಅತಿಥಿ ಶಿಕ್ಷಕರ ನೇಮಕಾತಿ ತಾತ್ಕಾಲಿಕವಾಗಿದೆ. ಸರ್ಕಾರಿ ನೇಮಕಾತಿ ಯಾವುದೇ ಕಾರಣದಿಂದ ಭರ್ತಿಯಾಗುವ ತನಕ ಅಥವಾ ಮಾ. 14 ರ ವರೆಗೆ ಮಾತ್ರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.