ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಣಬೆರೋಗ ನಿಯಂತ್ರಣದ ಕ್ಷೇತ್ರ ಪ್ರಯೋಗ

Srinivasa Murthy VN
Updated On : 27 Aug 2013, 11:26 am

ತಿಪಟೂರು: ತಾಲೂಕಿನ ಕೊನೇಹಳ್ಳಿ ಬಿದರೆಗುಡಿಕಾವಲ್‌ನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತೆಂಗಿನಲ್ಲಿ ಅಣಬೆ ರೋಗ ನಿಯಂತ್ರಣ ಕುರಿತು ಕ್ಷೇತ್ರ ಪ್ರಯೋಗವನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಗ್ರಾಮದ ರೈತ ಅರುಣ್‌ಕುಮಾರ್ ಅವರ ಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.  ಕೇಂದ್ರದ ವಿಜ್ಞಾನಿ ಡಾ.ಕೆ.ಎಂ.ಶ್ರೀನಿವಾಸ ರೆಡ್ಡಿ ಮಾತನಾಡಿ ತೆಂಗಿನಲ್ಲಿ ಅಣಬೆ ರೋಗ ನಿಯಂತ್ರಣ ಮಾಡುವ ಸೂಕ್ತ ಪದ್ಧತಿಯನ್ನು ಕಂಡುಕೊಳ್ಳುವ ಕ್ಷೇತ್ರ ಪ್ರಯೋಗ ಇದಾಗಿದೆ. ಈ ಪ್ರಯೋಗದಲ್ಲಿ ರೈತರ ಪದ್ಧತಿಯಾದ ಪಾಪಸ್ ಕಳ್ಳಿಯನ್ನು ತೆಂಗಿನ ಬುಡದಲ್ಲಿ ಬೆಳೆಸುವುದು, ರಸ ಸೋರುವ ಜಾಗದಲ್ಲಿ ಕೆತ್ತಿ ಗಾಯ ಮಾಡುವುದು ಹಾಗೂ ಸುಣ್ಣ ಮತ್ತು ಕೆಂಪು ಮಣ್ಣಿನಿಂದ ಕಾಂಡದಲ್ಲಿ ಪಟ್ಟಿ ಬರೆಯುವುದು. ಎರಡನೆಯದಾಗಿ ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ಶಿಫಾರಸ್ಸಿನಂತೆ ಮರದ ಸುತ್ತ ಬಸಿಗಾಲುವೆ ತೋಡುವುದು, ಪ್ರತಿ ಮರಕ್ಕೆ 5ಕೆಜಿ ಬೇವಿನಹಿಂಡಿ, 250 ಗ್ರಾಂ ಟ್ರೈಕೋಡರ್ಮ, 50 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಮರದ ಸುತ್ತ ಹಾಕುವುದು ನಂತರ 5 ಮಿಲಿ ಎಕ್ಸಾಕೋನೋಜ್ಲೋಲ್ ಔಷಧಿಯನ್ನು 100 ಮಿಲಿ ನೀರಿನಲ್ಲಿ ಮಿಶ್ರಣ ಮಾಡಿ ಬೇರಿನ ಮೂಲಕ ಕೊಡುವುದು ಹಾಗೂ ಮೂರನೆಯದಾಗಿ ದೇಸಿ ಪದ್ಧತಿಯಾದ 10 ಲೀ ಹಸುವಿನ ಗಂಜಲ, 1 ಕೆ.ಜಿ.ಸುಟ್ಟ ಸುಣ್ಣ, 20 ಲೀ.ಸಗಣಿ ದ್ರಾವಣವನ್ನು 250 ಗ್ರಾಂ ಟ್ರೈಕೋಡರ್ಮ ಜೊತೆ ಮಿಶ್ರಣ ಮಾಡಿಕೊಳ್ಳಬಹುದು ಎಂದರು.  

ನಾಳೆ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ:
  ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಪಟ್ಟಣದಲ್ಲಿ ನಡೆಸಲಾಗುವುದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಆ.29ರಂದು ತುಮಕೂರು ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಟ್ಟದ  14ರಿಂದ 17 ವರ್ಷ  ವಯೋವುತಿಯ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ಬೆಳ್ಳಿಗ್ಗೆ 9.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಸಿ.ಬಿ. ಸುರೇಶ್‌ಬಾಬು ಅಧ್ಯಕ್ಷತೆ ವಹಿಸುವರು. ಕ್ರೀಡಾ ಜ್ಯೋತಿಯನ್ನು ನೂತನ ಸಂಸದ ಡಿ.ಕೆ.ಸುರೇಶ್ ಸ್ವೀಕರಿಸುವರು. ಮುಖ್ಯ ಸಚೇತಕ ಎ.ಎಚ್.ಶಿವಯೋಗಿ, ಜಿಪಂ ಅಧ್ಯಕ್ಷೆ ಪ್ರೇಮಾಮಹಾಲಿಂಗ್ಪಪ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement