ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಕಾನೂನು ಬದ್ಧ ವಿಚ್ಛೇದನದಿಂದ ಮಹಿಳೆಗೆ ಸವಲತ್ತು ಸಾಧ್ಯ'

Srinivasa Murthy VN
Updated On : 27 Aug 2013, 11:25 am

ಕ.ಪ್ರ.ವಾರ್ತೆ ಕುಣಿಗಲ್ ಆ. 27
ಯಾವುದೇ ಜಾತಿಯವರಿರಲಿ ಮದುವೆ ಅವರ ಸಂಪ್ರದಾಯ, ಕಟ್ಟುಪಾಡುಗಳಂತೆ ನಡೆದರೂ, ಹಲವು ಕಾರಣಗಳಿಂದಾಗುವ  ವಿಚ್ಛೇದನ ಕಾನೂನು ಬದ್ಧವಾಗಿ ಆದಾಗ ಮಾತ್ರವೆ ನೊಂದ ಮಹಿಳೆಯರಿಗೆ ಕಾನೂನು ಬದ್ಧ ನೆರವು ಸವಲತ್ತು ದೊರಕಲು ಸಾಧ್ಯ ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶೆ ಎಲ್.ಶಾರದ ತಿಳಿಸಿದರು.
 ಮಂಗಳವಾರ, ಪಟ್ಟಣದ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿನ ಖಾಸಗಿ ಕಾರ್ಖಾನೆಯಲ್ಲಿ, ಕಾರ್ಮಿಕರಿಗಾಗಿ ಜಿಲ್ಲಾ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾನೂನು ಅರಿವು ನೆರವು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಬಹುತೇಕ ಪ್ರದೇಶಗಳಲ್ಲಿ ಸೂಕ್ತ ಕಾನೂನಿನ ಅರಿವಿಲ್ಲದೆ ಹಲವು ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಾ, ಅಶಾಂತಿಯಿಂದ ಬಳಲುವಂತಾಗಿದ್ದಾರೆ. ಮಹಿಳೆಯರು ಅದರಲ್ಲೂ ದುಡಿಯುವ ವರ್ಗದ ಮಹಿಳೆಯರು ದೈನಂದಿನ ಜೀವನದಲ್ಲಿ ತಮಗೆ ಎದುರಾಗುವ ಪರಿಸ್ಥಿತಿಗೆ ಅನುಗುಣವಾಗಿ ಕನಿಷ್ಠ ಕಾನೂನಿನ ಅರಿವು ಪಡೆದಾಗ ಕಾನೂನಿಂದ ನೆಮ್ಮದಿಯುತ ಜೀವನ ನಡೆಸಬಹುದಾಗಿದೆ. ಮಹಿಳಾ ಕಾರ್ಮಿಕರು ಸೇರಿದಂತೆ ಕಾನೂನಿನ ಅರಿವಿನ ಬಗ್ಗೆ ಯಾವುದೇ ನಾಗರಿಕರು ನ್ಯಾಯಾಲಯದ ಕಾನೂನು ಸೇವಾ ಪ್ರಾಧಿಕಾರದಲ್ಲಿ ಉಚಿತ ನೆರವು ಪಡೆಯಬಹುದೆಂದರು.
ಶೋಷಣೆ: ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ದಯಾನಂದ್, ಮಹಿಳಾ ಕಾರ್ಮಿಕರು ಇಂದು ಹೆಚ್ಚಿನ ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ, ಕಾನೂನು ಬದ್ಧವಾಗಿ ಅವರಿಗ ಕಲ್ಪಿಸಲಾಗಿರುವ ಕಾನೂನುಗಳ ಬಗ್ಗೆ ಕನಿಷ್ಠ ಅರಿವಿದ್ದಲ್ಲಿ, ಶೋಷಣೆ ಮುಕ್ತ ವಾತಾವರಣದಲ್ಲಿ ತಮಗಿರುವ ಸಂವಿಧಾನ ಬದ್ಧ ಹಕ್ಕನ್ನು , ಜೀವನವನ್ನು ಅನುಭವಿಸಬಹುದೆಂದರು. ವಕೀಲರಾದ ಕೆ.ಎಂ.ತಿಮ್ಮಪ್ಪ, ನವೀದಾ ಸುಲ್ತಾನ್, ಕಾರ್ಮಿಕ ಕಾಯಿದೆ, ಕಾರ್ಮಿಕರಿಗೆ ನೀಡಲಾಗಿರುವ ಕಾನೂನು ಬದ್ಧ ಸವಲತ್ತುಗಳ ಬಗ್ಗೆ ವಿವರಿಸಿದರು.
ಕಾರ್ಖಾನೆ ಮಾಲೀಕ ಬಾಲಾಜಿ ಅಧ್ಯಕ್ಷತೆ ವಹಿಸಿದ್ದು, ನ್ಯಾಯಾಧೀಶ ಎನ್.ಮುನಿರಾಜು, ಜಿ.ಕೆ.ದಾಕ್ಷಾಯಿಣಿ, ಎಪಿಪಿ ಸುರೇಖಾ ಹಿರೆಮಠ, ವಕೀಲ ನಿಸ್ಸಾರ್ ಆಹಮದ್, ಲೋಕೇಶ್, ಚಂದ್ರಶೇಖರ್, ರೆಹಮಾನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement