ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿ'

Srinivasa Murthy VN
Updated On : 29 Aug 2013, 12:15 pm

ತುಮಕೂರು: ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕೆಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಪೋಷಕರಿಗೆ ಕರೆ ನೀಡಿದರು.
ಅವರು ತುಮಕೂರಿನ ಹೊಟೇಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನೇಗಲಾಲ ಕುಟುಂಬ ವರ್ಗ ಏರ್ಪಡಿಸಿದ್ದ ಬಹುಭಾಷಾ ಸಾಹಿತಿ ನೇ.ನಂ. ಶಿವರಾಮಯ್ಯನವರು ಅನುವಾದಿಸಿದ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಡೊನೇಷನ್, ಯೂನಿಫಾರಂ ಕೊಡಿಸುವ ಮೂಲಕ ಶಿಸ್ತು ಬದ್ಧವಾಗಿ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಸಾಲದು. ಆ ಮಕ್ಕಳಿಗೆ ಶಾಲೆಯ ಶಿಕ್ಷಕರು ಮತ್ತು ಪೋಷಕರು ನಿಜವಾದ ಸಂಸ್ಕಾರವನ್ನು ಬೆಳೆಸುವುದರ ಜತೆಗೆ ಸಂಸ್ಕೃತಿ, ನೈತಿಕತೆ ಬಗ್ಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದು ಸ್ವಾಮೀಜಿ ಹೇಳಿದರು.
ಸಾಹಿತಿ ಶಿವರಾಮಯ್ಯನವರು ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಅದೃಷ್ಟದ ಆಟ, ತೆಲಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ ಮಾಘಕವಿ ಮತ್ತು ಸ್ವರಚಿತ ಕೃತಿ ಏಕನಾದ ಮತ್ತು ಇತರೆ ಪ್ರಬಂಧ ಕುರಿತ ಪುಸ್ತಕಗಳನ್ನು ಸ್ವಾಮೀಜಿ ಅವರು ಬಿಡುಗಡೆ ಮಾಡಿ ಸಾಹಿತಿ ಶಿವರಾಮಯ್ಯನವರು ಪುರುಷ ರೂಪದ ಸರಸ್ವತಿ ಎಂದು ಬಣ್ಣಿಸಿದರು.
ಶ್ಲಾಘನೆ: ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು 80 ವರ್ಷ ಪೂರೈಸಿದ ನೇ.ನಂ. ಶಿವರಾಮಯ್ಯ ಅವರಿಗೆ ಆಶೀರ್ವಾದ ಮಾಡಿ ಸಾಹಿತ್ಯ ಕ್ಷೇತ್ರದ ದಿಗ್ಗಜ್ಜರೆಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
ಎಸ್‌ಐಟಿ ಕಾಲೇಜಿನ ನಿರ್ದೇಶಕ ಎಂ.ಎನ್. ಚನ್ನಬಸಪ್ಪ, ಶಿವರಾಮಯ್ಯ ಪತ್ನಿ ಭಾಗ್ಯಲಕ್ಷ್ಮೀ, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಎನ್. ಅನಂತರಾಮು, ಎನ್. ಹನುಮಂತರಾವ್, ಯೋಗಪಟು ಎಂ.ಕೆ. ನಾಗರಾಜರಾವ್, ಕಿರುತೆರೆ ಕಲಾವಿದರಾದ ಎನ್ನೆಸ್ ರಮಾನಂದ, ಎನ್ನೆಸ್ ಮಾರುತಿ ಪ್ರಸಾದ್, ಎನ್ನೆಸ್ ಸಂಕೇತ ಗುರುದತ್, ಎನ್‌ಎಸ್‌ಪಿ ಸುಬ್ಬಲಕ್ಷ್ಮೀ ಸೇರಿದಂತೆ ನೇಗಲಾತ ಕುಟುಂಬ ವರ್ಗದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement