ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಿ: ಸಂಘದ ರಾಜ್ಯಾಧ್ಯಕ್ಷ ಕರೆ

Srinivasa Murthy VN
Updated On : 29 Aug 2013, 11:50 am

ಕ.ಪ್ರ.ವಾರ್ತೆ ತುಮಕೂರು ಆ.29
ನಿರ್ಲಕ್ಷಿತ ಮಡಿವಾಳ ಸಮಾಜವನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸಿ, ಮೀಸಲಾತಿ ಸವಲತ್ತುಗಳನ್ನು ನೀಡುವಂತೆ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ಸರ್ಕಾರಿ, ಅರೆ ಸರ್ಕಾರಿ, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಾಟಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದದು.
ಹಾಲಿ ಇರುವ ಸವಲತ್ತುಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದ ಅವರು, ಮಡಿವಾಳರನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿದರು.
ಸಮಾಜದ ಮಾಲಿನ್ಯವನ್ನು ಸ್ವಚ್ಛಗೊಳಿಸುವ ಮಡಿವಾಳರಿಗೆ ಸಮಾಜದಲ್ಲಿ ಮನ್ನಣೆಯಿಲ್ಲ. ರಾಜಕೀಯ ಸ್ಥಾನ-ಮಾನವಿಲ್ಲ ಎಂದು ವಿಷಾದಿಸಿದ  ನಂಜಪ್ಪ, ಜನಾಂಗ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿ ಮಡಿವಾಳರನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸಿ ಆ ವರ್ಗದ ಮೀಸಲಾತಿ ಸೌಲಭ್ಯ ದೊರೆಯುವಂತೆ  ಮಾಡಬೇಕು ಎಂದರು.
ವಿಷಾದ: ಜನಾಂಗದ ಮುಖಂಡ ಹಾಗೂ ಐಪಿಎಸ್ ಅಧಿಕಾರಿ ಎಚ್.ಎಸ್. ವೆಂಕಟೇಶ್ ಮಾತನಾಡಿ, ದೇಶದ ಇತರೆ 17 ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲೂ 125 ಬಲಾಢ್ಯ ಜಾತಿಗಳಿರುವ 2 ಎ ವರ್ಗಕ್ಕೆ ಸೇರಿಸಿ, ಮೂಲೆಗುಂಪು ಮಾಡಲಾಗಿದೆ ಎಂದು ವಿಷಾದಿಸಿದರು.
ಎಲ್ಲ ಕ್ಷೇತ್ರಗಳಲ್ಲೂ ನಿರ್ಲಕ್ಷಿತರಾಗಿರುವ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ, ಸೆ. 3 ನೇ ವಾರದಲ್ಲಿ ಬೆಂಗಳೂರಿನಲ್ಲಿ ಜನಾಂಗದ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.
ಮಡಿವಾಳರು ಸಂಘಟಿತರಾಗಬೇಕು. ಸಂಘಟಿತ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ವೆಂಕಟೇಶ್ ಕರೆ ನೀಡಿದರು.
ಮಡಿವಾಳ ಮಠದ ಶಿವಯೋಗಿಪುರಿ ಸ್ವಾಮಿಗಳು, ಮುಖಂಡರಾದ ಹೆಂಜಾರಪ್ಪ, ಪುಟ್ಟಯ್ಯ, ಲಕ್ಷ್ಮಣ್, ಯೋಗೀಶ್ವರಿ, ಶಾಂತಕುಮಾರ್, ಕೆಂಪನರಸಯ್ಯ, ಈರಣ್ಣ, ಕರಿಯಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement