ಸೆ.1 ಕ್ಕೆ ಸಿಐಟಿಯು ಕಾರ್ಮಿಕರ ಸಮಾವೇಶ
ತುಮಕೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ( ಸಿಐಟಿಯು) ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶವನ್ನು ನಗರದ ರವೀಂದ್ರ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಸೆ. 1 ರಂದು ಬೆಳಗ್ಗೆ 10-30 ಕ್ಕೆ ಹಮ್ಮಿಕೊಳ್ಳಲಾಗಿದೆ. ಸಮಾರಂಭವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರಾದ ಮಧುಗಿರಿಯ ಕೆ.ಎನ್. ರಾಜಣ್ಣ, ತುರುವೇಕೆರೆಯ ಎಂ.ಟಿ. ಕೃಷ್ಣಪ್ಪ, ಕುಣಿಗಲ್‌ನ ಡಿ. ನಾಗರಾಜಯ್ಯ, ಕೊರಟಗೆರೆಯ ಪಿ.ಆರ್. ಸುಧಾಕರ್‌ಲಾಲ್, ಗುಬ್ಬಿಯ ಎಸ್.ಆರ್. ಶ್ರೀನಿವಾಸ್, ಪಾವಗಡದ ತಿಮ್ಮರಾಯಪ್ಪ, ಚಿ.ನಾ. ಹಳ್ಳಿಯ ಸಿ.ಎಸ್. ಸುರೇಶ್‌ಬಾಬು, ತುಮಕೂರು ನಗರದ ಡಾ. ರಫೀಕ್ ಅಹಮದ್, ತುಮಕೂರು ಗ್ರಾಮಾಂತರದ ಬಿ. ಸುರೇಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಎಂ.ಆರ್. ಹುಲಿನಾಯ್ಕರ್ ಪಾಲ್ಗೊಳ್ಳಲ್ಲಿದ್ದಾರೆ. ಹಾಗೆಯೇ ಅಂಚೆ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ, ಜಿಲ್ಲಾ ಕಟ್ಟಡ ಮತ್ತಿತರೆ ನಿರ್ಮಾಣ ಕಾರ್ಮಿಕರ ಪೆಡರೇಷನ್ ಜಿಲ್ಲಾಧ್ಯಕ್ಷ ಬಿ. ಉಮೇಶ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್. ಕೆ. ಸುಬ್ರಹ್ಮಣ್ಯ, ಜಿಲ್ಲಾ ಪೌರ ಕಾರ್ಮಿಕರ ಸಂಘದ ಸಿ. ವೆಂಕಟೇಶ್, ಹಮಾಲಿ ಕಾರ್ಮಿಕ ಫೆಡರೇಷನ್‌ನ ಪೋತರಾಜು, ಕೈಗಾರಿಕಾ ಕಾರ್ಮಿಕರ ಸಂಘದ ಷಣ್ಮುಖಪ್ಪ, ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಹಮದ್ ದಸ್ತಗೀರ್, ರಾಜ್ಯ ರಸ್ತೆ ಸಾರಿಗೆ ಫೆಡರೇಷನ್ ಜಿಲ್ಲಾಧ್ಯಕ್ಷ ದೇವರಾಜು, ತುಮಕೂರು ಫುಟ್‌ಪಾತ್ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಇಬ್ರಾಹಿಂ, ಜಿಲ್ಲಾ ತಾಂತ್ರಿಕ ಸಂಸ್ಥೆಗಳ ಬೋಧಕೇತರರ ಸಂಘದ ಟಿ.ಜಿ. ಶಿವಲಿಂಗಯ್ಯ ಪಾಲ್ಗೊಳ್ಳಲ್ಲಿದ್ದಾರೆ.
ಹೃದ್ರೋಗ ತಪಾಸಣೆ, ರಕ್ತದಾನ ಶಿಬಿರ
ಶಿರಾ: ನಗರದ ಶ್ರೀ ರಂಗನಾಥ ಪ.ಪೂ. ಕಾಲೇಜಿನಲ್ಲಿ ತಾಲೂಕು ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿ ವತಿಯಿಂದ ನಡೆದ ಉಚಿತ ಹೃದ್ರೋಗ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಸಂಘದ ಅಧ್ಯಕ್ಷ ಸಿದ್ದೇಶ್ವರ್, ಗೌರವಾಧ್ಯಕ್ಷ ಅತಾವುಲ್ಲಾ ನೇತೃತ್ವದಲ್ಲಿ ನಡೆಸಲಾಯಿತು.
ಅರ್ಜಿ ಆಹ್ವಾನ
ತುಮಕೂರು: ಯಶಸ್ವಿನಿ ರೈತರ ಆರೋಗ್ಯ ರಕ್ಷಣಾ ಯೋಜನೆಯು ರಾಜ್ಯದಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯಡಿ ಆರೋಗ್ಯ ರಕ್ಷಣೆಯನ್ನು ಪಡೆಯಲು ಗ್ರಾಮೀಣ ಸಹಕಾರ ಸಂಘಗಳಲ್ಲಿ ಆಗಸ್ಟ್ 1, 2013 ಕ್ಕೆ ಮೂರು ತಿಂಗಳು ಮುಂಚಿತವಾಗಿ ಸದಸ್ಯರಾದವರು ಹಾಗೂ ನವಜಾತ ಶಿಶುವಿನಿಂದ ಹಿಡಿದು 75 ವರ್ಷದವರೆಗಿನವರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.