ಆತ್ಮವಿಶ್ವಾಸ ವೃದ್ಧಿಗೆ ಪ್ರವಚನ ಸಹಕಾರಿ
ಕ.ಪ್ರ.ವಾರ್ತೆ ಮಧುಗಿರಿ ಆ. 31
ಪ್ರವಚನಗಳು ಎಲ್ಲರನ್ನೂ ಒಗ್ಗೂಡಿಸಿ ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಭಕ್ತಿಭಾವ ಮೂಡಿಸುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಮಲಾನಂದರು ತಿಳಿಸಿದರು.
ತಾ.ಕಸಬಾ ಡಿ.ವಿ.ಹಳ್ಳಿ ಕುಡೂತಿ ವೇಣಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಕೃಷ್ಣ ಒಕ್ಕೂಟದವರು ಏರ್ಪಡಿಸಿದ್ದ ವರಮಹಾಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ, ಜನತೆ ಆತ್ಮವಿಶ್ವಾಸದಿಂದ ಸಮಾಜದ ಏಳಿಗೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಶಾಂತಿ, ನೆಮ್ಮದಿಯ ಬದುಕು ಸಾಗಿಸಲು ಪ್ರವಚನಗಳು ದಾರಿದೀಪ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ತುಂಗೋಟಿ ರಾಮಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸು ಮಾಡಲು ಡಾ.ವೀರೇಂದ್ರ ಹೆಗ್ಗಡೆ ಅವರು ಶ್ರಮಸುಸುತ್ತಿರುವುದು ಶ್ಲಾಘನಿಯ ಎಂದರು. ಎಸ್.ಕೆ. ಅಶ್ವತ್ಥನಾರಾಯಣಗೌಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಯೋಧ ರಾಜಣ್ಣ, ಯೋಜನಾಧಿಕಾರಿ ಜಿನ್ನಪ್ಪ, ಸಾಕ್ಷಿ ಗಣಪತಿ ವೆಂಕಟನಾಗ್, ಮೇಲ್ವಿಚಾರಕ ಗಿರೀಶ್, ಸೇವಾ ಪ್ರತಿನಿಧಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ತಿಪ್ಪೇಸ್ವಾಮಿ ನಿರೂಪಿಸಿ, ಶಾಂತರಾಮು ಸ್ವಾಗತಿಸಿ, ಕೃಷ್ಣಮೂರ್ತಿ ವಂದಿಸಿದರು.