ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶೀಘ್ರವೇ ಸರ್ಕಾರಕ್ಕೆ ವರದಿ ಜಿಲ್ಲಾಧಿಕಾರಿ ಸತ್ಯಮೂರ್ತಿ ಭರವಸೆ

Srinivasa Murthy VN
Updated On : 31 Aug 2013, 11:29 am

ಕ.ಪ್ರ.ವಾರ್ತೆತುಮಕೂರು ಆ.31
ಪಟ್ಟನಾಯಕನಹಳ್ಳಿ ಮಠ ಹಾಗೂ ಸಿಡಿಯಜ್ಜನಪಾಳ್ಯದ ವಂಶಸ್ಥರ ನಡುವಿನ ಶವಸಂಸ್ಕಾರ ಜಾಗ ವಿವಾದದ ವಾದ- ಪ್ರತಿವಾದ ಆಲಿಸಲಾಗಿದ್ದು, ಸರ್ಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿಗಳು ಆದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಠದ ಪರ ವಕೀಲ ತುಳಸೀದಾಸ್ ಲಿಖಿತ ವಾದದ ಪ್ರತ್ರಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮತ್ತೊಮ್ಮೆ ತಮಗೆ ವಾದ ಮಂಡಿಸಲು ಅವಕಾಶ ನೀಡುವಂತೆ ಮಠದ ಪರ ಭಕ್ತರು ಒತ್ತಾಯಿಸಿದರು. ಕಳೆದ ಜುಲೈ 30 ರಂದು ನಡೆದ ಸಭೆಯಲ್ಲಿ ಎರಡೂ ಕಡೆಯವರಿಗೆ ವಾದ ಮಂಡಿಸಲು ಕಾಲಾವಕಾಶ ನೀಡಲಾಗಿತ್ತಾದರೂ ಮಠದ ಕಡೆಯವರು ಮತ್ತೆ ವಾದ ಮಂಡನೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದು ಜಿಲ್ಲಾಧಿಕಾರಿಗಳನ್ನು ಕೆರಳಿಸಿತು. ಈ ಸಂದರ್ಭದಲ್ಲಿ ವಕೀಲರ ಹೊರತುಪಡಿಸಿ ಉಳಿದವರೆಲ್ಲ ಹೊರಹೋಗುವಂತೆ ಸೂಚಿಸಿದರು.  ಆನಂತರ ಎರಡೂ ಕಡೆಯ ಮುಖಂಡರು ಸುಮ್ಮನಾದರು.
ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಮತ್ತೆ ವಾದ- ಪ್ರತಿವಾದದ ಅಗತ್ಯವಿಲ್ಲ. ಈಗಾಗಲೇ ಪಡೆದಿರುವ ದಾಖಲೆಗಳು, ಹೇಳಿಕೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಆದರೂ, ನಮ್ಮ ಹೇಳಿಕೆ ನೀಡಲು ಅವಕಾಶ ಕೊಡುವಂತೆ ಮಠದವರು ಮನವಿ ಮಾಡಿಕೊಂಡಾಗ ಅವಕಾಶ ಕೊಡಲಾಯಿತು. ಈ ಸಂದರ್ಭದಲ್ಲಿ ಮಠದ ಪರ ವಾದ ಮಂಡಿಸಿದ ವಕೀಲ ತುಳಸೀದಾಸ್, ಜುಲೈ 7, 1975 ರಲ್ಲಿ ಎಲ್ಲ ಜಾಗವನ್ನು ಮಠದ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳಲಾಗಿದೆ. ಯಾವ ನ್ಯಾಯಾಲಯದಲ್ಲಿಯೂ ಹಾಲಿ ಪೀಠಾಧ್ಯಕ್ಷ ನಂಜಾವಧುತ ಶ್ರೀಗಳು ಸ್ವಾಮೀಜಿ ಅಲ್ಲ ಎಂಬ ತೀರ್ಪು ನೀಡಿಲ್ಲ. ಕುಮಾರ ಅವಧೂತ ಸ್ವಾಮೀಜಿ ಅವರ ಕಾನೂನುಬದ್ಧ ವಾರುಸುದಾರ ನಂಜಾವಧೂತ ಶ್ರೀಗಳು ಎಂದು ತಮ್ಮ ವಾದ ಮುಂದಿಟ್ಟರು.
ವಿಲ್ ಅನೂರ್ಜಿತ: ಸಿಡಿಯಜ್ಜನಪಾಳ್ಯದ ವಂಶಸ್ಥರ ಪರ ಪ್ರತಿವಾದ ಮಂಡಿಸಿದ ವಕೀಲ ರವಿ, ಕುಮಾರ ಅವಧೂತ ಸ್ವಾಮೀಜಿ ಮಾಡಿರುವ ವಿಲ್ ಅನೂರ್ಜಿತ. ಕುರುಬ ಜನಾಂಗದವರು ದಾನ ಮಾಡಿರುವ ಭೂಮಿ ದೇವಸ್ಥಾನಕ್ಕೆ ನೀಡಲಾಗಿದೆ. ಅದು ಮಠದ ಆಸ್ತಿಯಲ್ಲ ಎಂದರು.
ಸಭೆ ಬರಾಕಾಸ್ತು: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಹೆಚ್ಚಿನ ವಾದ, ಪ್ರತಿವಾದದ ಅಗತ್ಯವಿಲ್ಲ. ವ್ಯಾಜ್ಯ ನ್ಯಾಯಾಲಯದಲ್ಲಿ ಇರುವುದರಿಂದ ಭೂ ವಿವಾದ ಕುರಿತಂತೆ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಹೇಳಿ ಸಭೆ ಮುಕ್ತಾಯಗೊಳಿಸಿದರು. ಪಟ್ಟನಾಯಕನಹಳ್ಳಿ ಮಠದ ಪರವಾಗಿ ವಿಜಯಕುಮಾರ್, ಮಂಜುನಾಥ್, ಶ್ರೀನಿವಾಸಯ್ಯ ಹಾಗೂ ಸಿಡಿಯಜ್ಜನ ಪಾಳ್ಯದ ವಂಶಸ್ಥರ ಪರವಾಗಿ ಮಹಾಲಿಂಗಯ್ಯ, ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement